Baa Maleye Baa - From "Accident"

ಬಾ ಮಳೆಯೇ ಬಾ
ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ
ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ, ಹಿಂತಿರುಗಿ ಹೋಗದಂತೆ
ಬಿಡದೆ ಬಿರುಸಾಗಿ ಸುರಿ

ಬಾ ಮಳೆಯೇ ಬಾ
ಬಾ ಮಳೆಯೇ ಬಾ

ಓಡು ಕಾಲವೇ ಓಡು
ಬೇಗ ಕವಿಯಲಿ ಇರುಳು
ಓಡು ಕಾಲವೇ ಓಡು
ಬೇಗ ಕವಿಯಲಿ ಇರುಳು
ಕಾದಿಹಳು ಅಬಿಸಾರಿಕೆ
ಅವಳಿಲ್ಲಿ ಬಂದೊಡನೆ
ನಿಲ್ಲು ಕಾಲವೇ ನಿಲ್ಲು
ನಮ್ಮ ತೆಕ್ಕೆ ಸಡಿಲಾಗದಂತೆ

ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ

ಬೀಸು ಗಾಳಿಯೇ ಬೀಸು, ನನ್ನೆದೆಯ ಆಸೆಗಳ
ಬೀಸು ಗಾಳಿಯೇ ಬೀಸು, ನನ್ನೆದೆಯ ಆಸೆಗಳ
ನಲ್ಲೆ ಹೃದಯಕ್ಕೆ ತಲುಪಿಸು
ಹಾಸು ಹೂಗಳ ಹಾಸು
ಅವಳು ಬರೋ ದಾರಿಯಲ್ಲಿ
ಕಲ್ಲುಗಳು ತಾಗದಂತೆ

ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ

ಬೀರು ದೀಪವೇ ಬೀರು ನಿನ್ನ ಹೊಂಬೆಳಕಲ್ಲಿ
ಬೀರು ದೀಪವೇ ಬೀರು ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ
ಆರು ಬೇಗನೆ ಆರು
ಶೃಂಗಾರ ಛಯೆಯಲ್ಲಿ
ನಾಚಿ ನೀರಾಗದಂತೆ

ಬಾ ಮಳೆಯೇ ಬಾ
ಬಿಡದೆ ಬಿರುಸಾಗಿ ಸುರಿ
ನಲ್ಲೆ ಹಿಂತಿರುಗಿ ಹೋಗದಂತೆ



Credits
Writer(s): Birur Raja Lakshmanrao, Ricky Kej
Lyrics powered by www.musixmatch.com

Link