Neene Bari Neene

ಆಹಾ .ಆಹಾ... ಎಹೇ ...ಓ ಓ .ಆಹಾ...
ನೀನೆ ಬರಿ ನೀನೆ ಈ ಹಾಡಲ್ಲಿ ಪದವೆಲ್ಲ ನೀನೆ ।।2।।
ನೀನೆ ಬರಿ ನೀನೆ ಎದೆಯಾಳದ ಅಲೆಯಲ್ಲ ನೀನೆ
ನೀನೆ ಬರಿ ನೀನೆ ಅನುರಾಗದ ಸ್ವರವೆಲ್ಲ ನೀನೆ
ನೀನೆ ಬರಿ ನೀನೆ ಈ ಹಾಡಲ್ಲಿ ಪದವೆಲ್ಲ ನೀನೆ.

ಆಕಾಶದಲ್ಲಿಯ ಆ ಮೋಡಕೆ ಆಕಾರ ನಿನ್ನದೇ ತಾ ಮೂಡಿದೆ
ಏಕಾಂತದಲ್ಲಿಯ ಈ ಬಿನ್ನಹ ಸ್ವೀಕಾರ ಮಾಡೆಯ ತಡ ಮಾಡದೆ
ನೀನೆ ತೀರದ ಹಂಬಲ ಭಾವದ ಬೆಂಬಲ
ತಂದಿದೆ ವ್ಯಾಮೋಹದ ಮಿಡಿತ ನಿನಗಾಗಿಯೇ,, ನಿನಗಾಗಿಯೇ .
।।ನೀನೆ ಬರಿ ನೀನೆ।।

ನಿನಗೆಂದೇ ಈ ಸಾಲು ಅಂಗಡಿಯಲಿ
ಉಡುಗೊರೆಯ ಏನೆಂದು ನಾ ಆಯಲಿ
ನಾ ಬಡವ ಈ ನನ್ನ ಬದುಕಲ್ಲಿರೋ
ಸಡಗರದ ಸಿರಿ ಹೇಗೆ ನಾ ನೀಡಲಿ
ಬೇರೇ ಏನಿದೆ ಕಾಣಿಕೆ ಪ್ರೀತಿಗೆ ಹೋಲಿಕೆ
ಅರಳಿದೆ ಈ ಜೀವದ ಹೂವು ನಿನಗಾಗಿಯೇ ... ನಿನಗಾಗಿಯೇ.
।।ನೀನೆ ಬರಿ ನೀನೆ।।Credits
Writer(s): Mano Murthy
Lyrics powered by www.musixmatch.com

Link