Vidhi Baraha - From "Sojiga"

ವಿಧಿಬರಹ ಯಾಕಾಗಿ ಹೀಗಾಯ್ತು
ಬೇಕಿಹುದೇ ಮರು ಪ್ರಸ್ತಾವನೆ
ಈ ವಿರಹ ಬಿಸಿಲಾಗಿ ಬಂದಾಯ್ತು
ಕೆಡಿಸಿಹುದೇ ಒಲವಾ ತಂಪನೇ
ಚಿವುಟಿದೆ ಚಂದ್ರನ ಚದುರಿದ ಮೇಘವು
ಹೊರಟಿದೆ ವೇಗದಿ ಬಿಡದೇನೆ ಸುಳಿವು

ವಿಧಿಬರಹ ಯಾಕಾಗಿ ಹೀಗಾಯ್ತು
ಬೇಕಿಹುದೇ ಮರು ಪ್ರಸ್ತಾವನೆ

ನೀ ನಡೆದಿರೋ ಆ ಕಾಲು ದಾರಿಯು
ಕಂಗಾಲಾಗಿದೆ ನೀ ಕಣ್ಮರೆಯಾಗಲು
ನೀ ಅಡಗಿರೋ ನನ್ನ ನೆನಪುಗಳೆಲ್ಲವೂ
ಅಂಗಾಲಾಚಿವೆ ನೀ ನನ್ನವಳಾಗಲು
ಬಿರುಸಿನ ಗಾಳಿಗೆ ಭುಗಿಲೆದ್ದ ಧೂಳು
ಭುವಿಯಲಿ ತಂದಿದೆ ಹಗಲಲ್ಲೆ ಇರುಳು

ವಿಧಿಬರಹ ಯಾಕಾಗಿ ಹೀಗಾಯ್ತು

ದಾ ದದದಾದ ನೀನಿನಿನಿ ಸಸಸಸ
ರೀ ನಿಸದನಿ ಮಪಸ ದನಿ ಪಮ
ಪಾನಿನಿಪಮ ಪನಿಪ ಗಮರಿಸ
ರಿಪ ಗಾಮರಿಸ
ಪಗಮರಿಸ
ಪಗಾಮರಿಸ
ಪಗಮರಿಸ

ನೀ ಜೊತೆಗಿರೋ ಆ ಚಂದದ ದಿನಗಳು
ಚಂದಾ ಕೇಳಿದೆ ಕಣ್ಣಂಚಲಿ ಈಗಲೂ
ಹಚ್ಚೆ ಹಾಕಿರೋ ನಿನ್ನ ಹೆಸರನ್ನು
ಅಳಿಸಿ ಹಾಕಿದೆ ಕರಾಳ ಕನಸುಗಳು
ತೆರೆಗಳ ಮಾತಿಗೆ ಮನನೊಂದ ಮುಗಿಲು
ತೀರದ ಮೌನಕೆ ಹೊಣೆ ಈಗ ಕಡಲು

ವಿಧಿಬರಹ ಯಾಕಾಗಿ ಹೀಗಾಯ್ತು
ಬೇಕಿಹುದೇ ಮರು ಪ್ರಸ್ತಾವನೆ



Credits
Writer(s): Sunaad Gowtham, Param Bharadwaj
Lyrics powered by www.musixmatch.com

Link