Gaaliye (From "Sanchari")

ಗಾಳಿಯೇ ನೋಡು ಬಾ ದೀಪದ ನರ್ತನ
ರಾತ್ರಿಯೇ ನೀಡು ಬಾ ಮಾಯದ ದರ್ಪಣ
ನಿನ್ನಂತೆ ಕಾಡಿಲ್ಲ ಇನ್ನಾರು ನನ್ನ
ನಿನ್ನಿಂದ ಈ ಪಾಡು ಇನ್ನೂನು ಚೆನ್ನ
ಅದೇ ಪ್ರೀತಿಯ ಲಕ್ಷಣ

ಗಾಳಿಯೇ ನೋಡು ಬಾ ದೀಪದ ನರ್ತನ

ಸಂಚಾರಿ ಮನ ಸೆರೆಯಾದ ಕ್ಷಣ, ಎದೆ ಗೂಡಲ್ಲಿ ಚಂದ್ರೋದಯ
ಸಿಹಿಯಾದ ಅಲೆ ಶುರು ಆದಾಗಲೇ ನಿಜ ಸಂಗಾತಿ ನೀನಾದೆಯಾ
ಮಗಮರಿನಿನಿಸ
ಮಗಮಗಮಸಾದ
ಕನಸು ತಾಜಾ ಇದೆ
ಮನಸು ಬೇರೆಸೋಣ
ಅದೇ ಪ್ರೀತಿಯ ಲಕ್ಷಣ

ಗಾಳಿಯೇ ನೋಡು ಬಾ ದೀಪದ ನರ್ತನ

ಹೆಸರನ್ನು ಸಹ ಮರೆವಂತ ಭಯ
ಇದು ಏನಿಂತ ಆಕರ್ಷಣೆ
ಮರುಳದಾಗಲೇ ಮರುಜನ್ಮವಿದೆ
ಬಿಗಿ ಮೌನಾನೇ ಸಂಭಾಷಣೆ
ಮಗಮರಿನಿನಿಸ
ಮಗಮಗಮಸಾದ
ಒಗಟು ಒಂದಾಗಿದೆ
ಜೊತೆಯ ಬಿಡಿಸೋಣ
ಅದೇ ಪ್ರೀತಿಯ ಲಕ್ಷಣ

ಗಾಳಿಯೇ ನೋಡು ಬಾ
ದೀಪದ ನರ್ತನ



Credits
Writer(s): Arjun Janya, V. Nagendraprasad
Lyrics powered by www.musixmatch.com

Link