Yekangi Nanu Yekangi

(मोरारे घर आजारे
आजारे घर आजा)

ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ
ಏಕಾಂಗಿ ನಾನು ಏಕಾಂಗಿ
ಏಕಾಂಗಿ ನಾನು ಏಕಾಂಗಿ
ಎಲ್ಲೋ ಆಚೆಗೆ ಮರೆಯಾಗಿ
ಎನೋ ಕಾದಿದೆ ನನಗಾಗಿ

ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

(ಗೋವಿಂದ ಗೋವಿಂದ ಹರೇ
ಗೋಪಾಲ ಗೋಪಾಲ ಹರೇ
ಗೋವಿಂದ ಗೋವಿಂದ ಹರೇ ಗೋಪಾಲ)

ಎಷ್ಟೊಂದು ಪಾತ್ರ ನೀಡುವಾ
ಬದುಕೊಂದು ಧಾರವಾಹಿಯೆ
ಈ ನಾಲ್ಕು ಗೋಡೆ ಆಚೆಗೆ
ನಿಜವಾದ ಪಾಠಶಾಲೆಯೆ
ಎಲೆಯ ಹಿಂದೆಯೆ ಮರೆಯಾಗಿ
ಹೂವು ಕಾದಿದೆ ನನಗಾಗಿ

ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

(मोरारे घर आजा
आजारे घर आजा)

ಅಂಗೈಯ ಮೇಲೆ ಕೂತಿರೋ
ಬಣ್ಣದ ಚಿಟ್ಟೆ ಈ ಕ್ಷಣಾ
ತಲ್ಲೀನನಾಗಿ ಬಾಳಲು
ಇನ್ನೇನು ಬೇಕು ಕಾರಣ
ಮೋಡದಲ್ಲಿಯೆ ಮರೆಯಾಗಿ
ಕಿರಣಾ ಕಾದಿದೆ ನನಗಾಗಿ

ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

ಏಕಾಂಗಿ ನಾನು ಏಕಾಂಗಿ
ಏಕಾಂಗಿ ನಾನು ಏಕಾಂಗಿ

ಎಲ್ಲೋ ಆಚೆಗೆ ಮರೆಯಾಗಿ
ಎನೋ ಕಾದಿದೆ ನನಗಾಗಿ

Credits
Writer(s): Jayanth Kaikini, Kiran Ravindranath
Lyrics powered by www.musixmatch.com

Link