Manasa Gange (From "Payana")

ಆಹಾ-ಹಾ, ಆ, ಆ, ಆ, ಆ-ಆ-ಆ
ಆಹಾ-ಹಾ, ಆ, ಆ, ಆ, ಆ-ಆ-ಆ

ಮಾನಸ ಗಂಗೆ, ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ, ಮಾನಸ ಗಂಗೆ
ಅವಳೇ ನನ್ನ ಅಂತರ ಗಂಗೆ, ನನ್ನಾಣೆ
ಆ ಗೊಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ
ಬಂಗಾರ, ಬಂಗಾರ, ಧರೆಗಿಳಿದ ಮಂದಾರ

ಮಾನಸ ಗಂಗೆ, ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ

ಸಯ್ಯ, ಸಯ್ಯ, ಸಯ್ಯ ರೆ, ಸಯ್ಯ, ಸಯ್ಯ, ಸಯ್ಯ
ಸಯ್ಯ, ಸಯ್ಯ, ಸಯ್ಯ ರೆ, ಸಯ್ಯ ರೆ
ಸಯ್ಯ, ಸಯ್ಯ, ಸಯ್ಯ ರೆ, ಸಯ್ಯ, ಸಯ್ಯ, ಸಯ್ಯ
ಸಯ್ಯ, ಸಯ್ಯ, ಸಯ್ಯ ರೆ, ಸಯ್ಯ ರೆ

ಚಂದಮಾಮ ಕೈ ಚಾಚಿದ, "ಬಾರೇ" ಎಂದು ಗೋಳಾಡಿದ
"ಇವನ ಬಿಟ್ಟು ಹೋಗಲಾರೆ, ಊಹುಂ" ಎಂದಳು
ಹೋ, ಅಂತರಂಗ ಹಾಲಾಯಿತು, ಅಂತು-ಇಂತು ಹೆಪ್ಪಾಯಿತು
ಪ್ರತಿಜನ್ಮ ಇವಳೇ ಎಂದು ಒಪ್ಪಾಯಿತು

ಅಭಿಮಾನಕೂ ಇವಳೇ, ಅನುಬಂಧಕೂ ಇವಳೇ
ಅನುರಾಗವೂ ಇವಳೇ, ಅನುಗಾಲವೂ ಇವಳೇನೇ
ಪಯಣ ಪ್ರೀತಿಯ ಕಡೆಗೆ, ಪಯಣ ಪ್ರೀತಿಯ ಜೊತೆಗೆ

ಮಾನಸ ಗಂಗೆ, ಮಾನಸ ಗಂಗೆ
ಅವಳೇ ನನ್ನ ಅಂತರ ಗಂಗೆ

ಕಪ್ಪು ಕಣ್ಣೇ ಕಾದಂಬರಿ, ಕೆನ್ನೆ ಬಣ್ಣ ಕನಕಾಂಬರಿ
ನಾಚಿ ನೀಲಿ ಆಗುವ ನೀಲಾಂಬರಿ
ಮಳೆಬಿಲ್ಲು ಮಾತಾಡಿತು, ಹೊಸ ಬಣ್ಣ ನೀಡೆಂದಿತು
ನನ್ನ ನಲ್ಲೆ ಬಣ್ಣಗಳಿಗೆ ಬಹುರೂಪಸಿ

ನನ್ನ ಪಾಡು ಇವಳೇ, ನನ್ನ ಹಾಡು ಇವಳೇ
ನನ್ನ ಜಾಡು ಇವಳೇ, ಅನ್ವೇಷಣೆ ಇವಳೇನೇ
ಪಯಣ ಪ್ರೀತಿಯ ಕಡೆಗೆ, ಪಯಣ ಪ್ರೀತಿಯ ಜೊತೆಗೆ

ಮಾನಸ ಗಂಗೆ, ಮಾನಸ ಗಂಗೆ
ಅವಳ ಅಂದ ಹೇಳಲಿ ಹೆಂಗೆ
ಮಾನಸ ಗಂಗೆ, ಮಾನಸ ಗಂಗೆ
ಅವಳೇ ನನ್ನ ಅಂತರ ಗಂಗೆ, ನನ್ನಾಣೆ
ಆ ಗೊಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ
ಬಂಗಾರ, ಬಂಗಾರ, ಧರೆಗಿಳಿದ ಮಂದಾರ



Credits
Writer(s): V. Nagendra Prasad, V. Harikrishna
Lyrics powered by www.musixmatch.com

Link