Mathadu Nee (From "Tarak")

ಮಾತಾಡು ನೀ
ಹೃದಯದ ಮೌನ
ಹೃದಯಕೆ ಸೀದಾ
ತಲುಪುವ ಹಾಗೆ
ಮಾತಾಡು ನೀ
ಏನಾದರೂ
ಮಾತಾಡು ನೀ

ದೂರವೇ ನಿಂತು ಪ್ರೋತ್ಸಾಹ ನೀಡೋದು
ನಿನ್ನ ಕಲೆಗಾರಿಕೆ
ಕಾಣದಂತೇನೇ ಕಾದಿಟ್ಟ ಈ ಮೋಹ
ಬಂತು ಹೊರಗೇತಕೆ
ಮಿನು ಮಿನುಗಿದೆ ಕಣ್ಣುಗಳಲಿ
ಸವಿಗನಸಿನ ಠೇವಣಿ
ಹೊಸ ಹುರುಪಲಿ ಬೀಸುತಿರುವ ಗಾಳಿಯೊಡನೆ ಹೂವಿನಂತೆ

ಮಾತಾಡು ನೀ
ಹೇಗಾದರೂ ಮಾತಾಡು ನೀ

ಕಂಡ ಮಾತ್ರಕ್ಕೆ ನಾ ಸೋಲ ಬೇಕಿಲ್ಲ
ಚೂರು ಪುಸಲಾಯಿಸು
ಆಡದೇ ಇದ್ದ ಪ್ರೀತಿನೇ ಬಲು ಚಂದ
ಧಾಟಿ ಬದಲಾಯಿಸು
ಉಸಿರಿನ ಒಳ ಬೀದಿಗಳಲಿ
ಪಿಸು ನುಡಿಗಳ ಸಂದಣಿ
ನಸು ಬೆಳಕಲಿ ಮೀಯುತಿರುವ
ತೀರದೊಡನೆ ತೆರೆಗಳಂತೆ

ಮಾತಾಡು ನೀ
ಇನ್ನಾದರೂ
ಮಾತಾಡು ನೀ
ಹೃದಯದ ಮೌನ
ಹೃದಯಕೆ ಸೀದಾ
ತಲಪುವ ಹಾಗೆ
ಮಾತಾಡು ನೀ
ಏನಾದರೂ
ಮಾತಾಡು ನೀ



Credits
Writer(s): Arjun Janya, Jayanth Kaikini
Lyrics powered by www.musixmatch.com

Link