Singara Siriye (From "Kantara")

ಭತ್ತ ತೊಳು ಕೈಗೆ
ಬಣಿ ಮುಳ್ಳೇಟಿದ
ಮದಿಗ್ ಹೋದ ಅಣ್ಣಾ ಬರಲಿಲ್ಲ
ಮದಿಗ್ ಹೋದ ಅಣ್ಣಾ ಬರಲಿಲ್ಲ ಬಸರೂರ
ಹೂವ ಕಂಡಣ್ಣಾ ತೆಗದೀರಾ

ಏ ಸಿಂಗಾರ ಸಿರಿಯೇ
ಅಂಗಾಲಿನಲೇ ಬಂಗಾರ ಅಗೆವಾ ಮಾಯೆ
ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೆ
ಮಂದಹಾಸ
ಆಹಾ ನಲುಮೆಯ
ಶ್ರಾವಣ ಮಾಸ

(ಮುದ್ದಾದ ಮಾಯಾಂಗಿ
ಮೌನದ ಸಾರಂಗಿ
ಮೋಹದ ಮದರಂಗಿ
ಕನ್ನ ಹಾಕಿದೆ ಮುಂಗುರುಳ ಸೋಕಿ)

ನಾಗರ ಬಲ್ಯಡಿ ನಾಗನ ದರುಶಿನ
ಇಡೀನಿ ನಾರಿಯರೆ ಬನಕ್ ಹೂಗ್
ಇಡೀನಿ ನಾರಿಯರೆ ಬನಕ್ ಹೂಗ್ ಬನದ್ ಒಡತಿ
ಬೇಡಿದ್ ವರವನ್ನೆ ಕೊಡುವಳು

ಮಾತಾಡುವ ಮಂದಾರವೇ
ಕಂಗೊಳಿಸಬೇಡ ಹೇಳದೇ
ನಾನೇತಕೆ ನಿನಗ್ಹೇಳಲಿ
ನಿನ್ನ ಮೈಯ್ಯ ತುಂಬಾ ಕಣ್ಣಿದೆ

ಮನದಾಳದ ರಸ ಮಂಜರಿ
ರಂಗೇರಿ ನಿನ್ನ ಕಾದಿದೆ
ಪಿಸುಮಾತಿನ ಪಂದ್ಯಾವಳಿ
ಆಕಾಶವಾಣಿ ಆಗಿದೆ
ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠಮಾಡಿದೆ
ಮಾಡು ಬಾ ಕೊಂಗಾಟವ

ಕಣ್ಣಿಗೆ ಕಾಣೋ ಹೂವುಗಳೆಲ್ಲ
ಏನೋ ಕೇಳುತಿವೆ
ನಿನ್ನಯ ನೆರಳ ಮೇಲೆಯೇ ನೂರು
ಚಾಡಿ ಹೇಳುತಿವೆ

ಏ ಸಿಂಗಾರ ಸಿರಿಯೇ
ಅಂಗಾಲಿನಲೇ ಬಂಗಾರ ಅಗೆವಾ ಮಾಯೆ
ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೆ

ಶೃಂಗಾರದ ಸೋಬಾನೆಯ
ಕಣ್ಣಾರೆ ನೀನು ಹಾಡಿದೆ
ಈ ಹಾಡಿಗೆ ಕುಣಿದಾಡುವ
ಸಾಹಸವ ಯಾಕೆ ಮಾಡುವೆ?

ಸೌಗಂಧದ ಸುಳಿಯಾಗಿ ನೀ
ನನ್ನೆದೆಗೆ ಬೇಲಿ ಹಾಕಿದೆ
ನಾ ಕಾಣುವ ಕನಸಲ್ಲಿಯೇ
ನೀನ್ಯಾಕೆ ಬೇಲಿ ಹಾರುವೆ

ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠ ಮಾಡಿದೆ
ಮಾಡು ಬಾ ಕೊಂಗಾಟವ

ಸುಂದರವಾದ ಸೋಜಿಗವೆಲ್ಲ
ಕಣ್ಣಾ ಮುಂದೆ ಇದೆ
ಬಣ್ಣಿಸ ಬಂದ ರೂಪಕವೆಲ್ಲ
ತಾನೆ ಸೋಲುತಿದೆ

ಏ ಮಂದಹಾಸ
ಆಹಾ ನಲುಮೆಯ
ಶ್ರಾವಣ ಮಾಸ



Credits
Writer(s): B. Ajaneesh Loknath, Maravanthe Pramod
Lyrics powered by www.musixmatch.com

Link