Akasha Bhoomi

ಆಕಾಶ ಭೂಮಿ ಇಂದು ಒಂದಾದ ಹಾಗಿದೆ
ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ
ಆಕಾಶ ಭೂಮಿ ಇಂದು ಒಂದಾದ ಹಾಗಿದೆ
ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ
ತಂದಾನೋ ತಂದಾನೋ ತನುವೆಲ್ಲ ತಂದಾನೋ
ಚಂದಾನೋ ಚಂದಾನೋ ಜಗವೆಲ್ಲ ಚಂದಾನೋ
ಮನಸೆಲ್ಲ something something ಉಯ್ಯಾಲೆ ತೂಗಿದೆ
ಆಕಾಶ ಭೂಮಿ ಇಂದು ಒಂದಾದ ಹಾಗಿದೆ
ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ

ನಾ ಬರುವ ದಾರಿಯಲ್ಲಿ, ಹೂ ಬಳುಕುತಾವ ನೋಡಾ
ನಾಚಿ ನಿಂತೆ ನಾನು, ಅವು ಹಾಡಿತೊಂದು ಹಾಡ
ಹಾಡಲು ನಾನು ಜೊತೆಜೊತೆಗೆ, ಅರಳಿತು ಮನವು ಒಳಗೊಳಗೇ
ನದಿಯಂತೆ ಹರಿಯುವೆನು, ಮಂಜಂತೆ ಮುಸುಕುವೆನು
ತಿರುಗೋ ಈ ಭೂಮಿಯ ನೋಡಲು ಚಂದ್ರಮಕೆ ಹಾರುವೆನು
ಮನದಲ್ಲೇ ಮುಗಿಲನು ಸೇರಿ ಭುವಿಗೆ ಕೈ ಚಾಚುವೆನು

ಆಕಾಶ ಭೂಮಿ ಇಂದು ಒಂದಾದ ಹಾಗಿದೆ
ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ

ಸೌಂದರ್ಯ ರಾಗ ಲಹರಿ, ಬಂತೆನ್ನ ಮನಕೆ ಮರಳಿ
ತಲೆದೂಗುವಂತ ನಾದ, ತಂಗಾಳಿ ಬೀಸೋ ರವಳಿ
ಅಲೆ ಅಲೆ ಮೇಲೆ ಮೇಲೆ ಬರುತಿರೋ ಹಾಗೆ
ಸುಖ ದುಃಖವೆರಡು ಜೀವನ ಧಾರೆ
ಮುಸ್ಸಂಜೆ ಮಾತಲ್ಲಿ, ಈ ಜೀವ ಹಗುರಾಯ್ತು
ಕೋಗಿಲೆಯ ಹಾಡಂತೆ ಆ ಮಾತು ಇಂಪಾಯ್ತು
ಭಾವಗಳ ಸರಿಗಮ ಸೇರಿ ಸೊಗಸಾದ ಹಾಡಾಯ್ತು

ಆಕಾಶ ಭೂಮಿ ಇಂದು ಒಂದಾದ ಹಾಗಿದೆ
ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ
ಹೇ, ತಂದಾನೋ ತಂದಾನೋ ತನುವೆಲ್ಲ ತಂದಾನೋ
ಚಂದಾನೋ ಚಂದಾನೋ ಜಗವೆಲ್ಲ ಚಂದಾನೋ
ಮನಸೆಲ್ಲ something something ಉಯ್ಯಾಲೆ ತೂಗಿದೆ
ಆಕಾಶ ಭೂಮಿ ಇಂದು ಒಂದಾದ ಹಾಗಿದೆ
ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ



Credits
Writer(s): V. Sridhar
Lyrics powered by www.musixmatch.com

Link