Manase Manase

ಮನಸೇ ಮನಸೇ, ಯಾಕೆ ಮನಸೇ, ರಮಿಸೋ ಹಾಗೆ ನೀ ಕಾಡೋದು
ಪ್ರೀತಿ ಇಲ್ಲದೆ, ಬಾಳು ಸಾಗದೆ
ಕುಂತರೂ ನಿಂತರೂ ನಿನ್ನ ಧ್ಯಾನ, ನಿಲ್ಲದ ತುಂತುರು ನಿನ್ನದೇನಾ
ಕುಂತರೂ ನಿಂತರೂ ನಿನದೊಂದೇ ಧ್ಯಾನ, ಕೊಲ್ಲುವ ಮಂಪರು ನಿನ್ನದೇನಾ
ಮನಸೇ ಮನಸೇ.

ತಿಳಿದು ತಿಳಿದು ಮೂಡಿತಿಲ್ಲೇ ನುಡಿಗೆ ಸಿಗದ ಕಲ್ಪನೆ
ಸನಿಹ ಸುಳಿದು ದೂರದಲ್ಲೇ ಉಳಿದೆ ಏಕೆ ಸುಮ್ಮನೆ
ಬರೆಯದ ಕವಿತೆ ಒಡಲೊಳಗೆಲ್ಲಾ, ಒಲವಿನ ಹಣತೆ ಉರಿಸಿದೆಯಲ್ಲಾ
ಹೇಳು ಬಾ ಕಾರಣ.
ಕುಂತರೂ ನಿಂತರೂ.

ಎದೆಯ ವೀಣೆ ನುಡಿಸಿ ನೀನೆ ಸ್ವರಗಳಾಗಿ ಮೂಡಿದೆ
ಮನದ ಅಳಲು ಕೇಳದೇನೆ ಸುಡುವ ಚಿತೆಗೆ ದೂಡಿದೆ
ವಿರಹದ ಮೂಟೆ ಹರವಿದ ಹಾಗೆ ಮೊಗವಿರುವಾಗ ನಗುವುದು ಹೇಗೆ
ಜೀವನ ದಾರುಣ.
ಕುಂತರೂ ನಿಂತರೂ.



Credits
Writer(s): Sandeep Chowta, V. Nagendra Prasad
Lyrics powered by www.musixmatch.com

Link