Ille Swarga Ille Naraka

ಇಲ್ಲೇ ಸ್ವರ್ಗ ಇಲ್ಲೇ ನರಕ.
ಮೇಲೇನಿಲ್ಲ ಸುಳ್ಳು.
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು.

ಇಲ್ಲೇ ಸ್ವರ್ಗ ಇಲ್ಲೇ ನರಕ.
ಮೇಲೇನಿಲ್ಲ ಸುಳ್ಳು.
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು.

ಕಪ್ಪು ಬಿಳುಪು ಬಣ್ಣ ಹೇಗೊ
ಹಗಲು ರಾತ್ರಿ ಹಾಗೆ
ನಗುವು ಅಳುವು ಎರಡು ಉಂಟು
ಬೇಡ ಅಂದರೆ ಹೇಗೆ?

ಬಂದಾಗ ನಗುವೆ ಹೋದಾಗ
ಮಾತ್ರ ಕಣ್ಣೀರೇಕೊ ಕಾಣೆ?
ಕಸಿದುಕೊಳ್ಳುವ ಹಕ್ಕು ಎಂದು
ಕೊಟ್ಟೋನ್ಗೇನೇ ತಾನೆ.

ಇಲ್ಲೇ ಸ್ವರ್ಗ ಇಲ್ಲೇ ನರಕ.
ಮೇಲೇನಿಲ್ಲ ಸುಳ್ಳು.
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು.

ಬಿಸಿಲಿಗೆ ಕರಗೋ ಮಂಜೇನಲ್ಲ
ಕಷ್ಟ ನಷ್ಟ ಎಲ್ಲ
ಎದುರಿಸಬೇಕು ಧೈರ್ಯದಿಂದ ಬೇರೆ ದಾರಿಯಿಲ್ಲ ಬೆಟ್ಟ ಕೊರೆದು ದಾರಿ ಮಾಡಿ
ನೀರು ನುಗ್ಗೋ ಹಾಗೆ
ಮುಂದೆ ನುಗ್ಗಿ ಹೋದ್ರೆ ತಾನೆ
ದಾರಿ ಕಾಣೋದ್ ನಂಮ್ಗೆ

ಇಲ್ಲೇ ಸ್ವರ್ಗ ಇಲ್ಲೇ ನರಕ.
ಮೇಲೇನಿಲ್ಲ ಸುಳ್ಳು.
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು. shashi



Credits
Writer(s): Chi Udaya Shankar, G K Venkatesh
Lyrics powered by www.musixmatch.com

Link