Jeeva Jeeva - From "Maanikya"

ಜೀವ ಜೀವ ನಮ್ ಜೀವ ನಮ್ದೈವ ಕಣೋ ಇವನು
ನಮ್ಮ ಊರ ಕಣ್ಣಾಗೋ ಸರದಾರ ಕಣೋ ಇವನು
ನಿನ್ನ ನುಡಿಯ ಜಗ ಮೆಚ್ಚಿಕೊಳ್ಳಬೇಕು
ನಡಿಗೆ ನೋಡಿ ಕೈ ಎತ್ತಿ ಮುಗಿಯಬೇಕು
ಅಪರೂಪದ ಮಾಣಿಕ್ಯವೇ ನಮ್ಮೂರಿನ ದೊರೆ

ಜೀವ ಜೀವ ನಮ್ ಜೀವ ನಮ್ದೈವ ಕಣೋ ಇವನು
ನಮ್ಮ ಊರ ಕಣ್ಣಾಗೋ ಸರದಾರ ಕಣೋ ಇವನು

(ಧೂಂತನ ಧೂಂತನ ತನ ಧೂಂ ತೂಮ್
ಧೂಂತ ಧೂಂತ ತನ ತನಧೂಂ ತೂಮ್
ಧೂಂತನ ಧೂಂತನ ತನ ಧೂಂ ತೂಮ್
ತನನನ ಧೂಂ ತನನನ ಧೂಂ ತನನನ ಧೂಂ
ಧೂಂತ ಧೂಂತ ತನನನ)

ಬಾಲ್ಯದಿಂದ ಇಲ್ಲಿಯವರೆಗೂ
ಎಲ್ಲ ನೋವು ನಲಿವಿನ ಒಳಗೂ
ನಾನು ಕಂಡ ಲೋಕವೆಲ್ಲ ತಾಯಿ ಒಬ್ಬಳೇ
ನನಗೂ ಒಬ್ಬ ತಂದೆ ಇರುವ
ಕಾಣಲಿಕ್ಕೆ ಬಂದೆ ಬರುವ
ಎಂಬ ಕಥೆಯ ಒಪ್ಪಲಿ ಹೇಗೆ ಬಂದ ಕೂಡಲೇ
ಜೊತೆ ಬಾಳದ ಅಪ್ಪನ ದ್ವೇಷಿಸಲೇ
ಜಗ ಮೆಚ್ಚಿದ ಅವನನು ಪ್ರೀತಿಸಲೇ
ಕಣ್ಣಲ್ಲಿ ಕಣ್ಣಿಟ್ಟ ಕ್ಷಣವೇ
ಕಣ್ಣೀರಿನ ಹನಿಗಳೇ ಹೇಳುತಿವೆ
ನನ್ನ ಹೆತ್ತವ ಒಬ್ಬ ದೇವರು ನಾ ದೇವರ ಮಗ
ದೇವರ ಮಗ

ನೀತಿ ಒಂದೇ ನಿನ್ನ ವಸ್ತ್ರ
ಪ್ರೀತಿ ಒಂದೇ ನಿನ್ನ ಮಂತ್ರ
ನಿನ್ನ ಸಹನೆ ಸ್ವಾಭಿಮಾನ ಅಪರೂಪವೇ
ದೂರವಿರಲಿ ಹತ್ತಿರವಿರಲಿ
ದೂರುವವರು ದೂರುತಲಿರಲಿ
ನಿನ್ನ ಹಾಗೆ ನೀ ನಡೆಯೋದೆ ನಿಜ ರೂಪವು
ಕಣ್ಣೀರಿಗೆ ಕಣ್ಣಲಿ ಸ್ಥಳವಿಲ್ಲ
ನಿನ ರೆಪ್ಪೆಯ ಕಾವಲು ಇರುವಾಗ
ನೆತ್ತರಿಗೆ ಮಣ್ಣಲಿ ನೆಲೆ ಇಲ್ಲ
ನೀ ಮಣ್ಣಿನ ಮಗನಾಗಿರುವಾಗ
ಮಹಾರಾಜನು ಎಲ್ಲಿದರೂ ಮಹಾರಾಜನೇ ತಾನೇ
ಮಹಾರಾಜನೇ ತಾನೇ

ಜೀವ ಜೀವ ನಮ್ ಜೀವ ನಮ್ದೈವ ಕಣೋ ಇವನು
ನಮ್ಮ ಊರ ಕಣ್ಣಾಗೋ ಸರದಾರ ಕಣೋ ಇವನು
ನನ್ನ ಹೆತ್ತವ ಒಬ್ಬ ದೇವರು ನಾ ದೇವರ ಮಗ
ದೇವರ ಮಗ

ಜೀವ ಜೀವ ನಮ್ ಜೀವ ನಮ್ದೈವ ಕಣೋ ಇವನು



Credits
Writer(s): Kalyan K, S A Lokesh Kumar
Lyrics powered by www.musixmatch.com

Link