Kai Mugidu Yeru - From "Saarathee"

ಕೈ ಮುಗಿದು ಏರು ಇದು ಕನ್ನಡದ ತೇರು
ನಂಬಿ ಬಂದು ಕೂರು ಇದು ಕನ್ನಡಿಗನ ತೇರು
ನಮದು ಬೆವರಿನ ಬಂಡಿ ಎಂದು ನಿಲ್ಲುವುದಿಲ್ಲ
ನಿಮಗೆ ಸೇವೆಯ ಮಾಡೋ ಭಾಗ್ಯ ನೀಡಿದಿರಲ್ಲ
ನಾವೇ ನರ ನಾಡಿ ರಾಜಧಾನಿಗೆ
ಅತೀರಥ ಮಾಹಾರಥ ಸಾರಥಿ
ಸೂರ್ಯ ನಮ್ಗೆ ಎತ್ತುತಾನೆ ಆರತಿ
ಅತೀರಥ ಮಾಹಾರಥ ಸಾರಥಿ
ರಥ ನಡೆಸೋ ಕೃಷ್ಣನಿಗೆ ಸಂತತಿ

(ಬಂದನೋ ಬಂದನೋ ಬಂದನೋ ಬಂದನೋ
ಬಂದನೋ ಬಂದನೋ ಬಂದನೋ ಬಂದನೋ
ಬಂದನೋ ಬಂದನೋ ಬಂದನೋ ಬಂದನೋ
ಬಂದನೋ ಬಂದನೋ ಬಂದನೋ ಬಂದನೋ
ಬಂದನೋ ಬಂದನೋ styleಆಗಿ ಬಂದನೋ
ನಮ್ಮ ಸಾರಥಿ ಬಂದನೋ
ಅವ್ನ ಮಾತಲ್ಲಿ ಗಂಭೀರ lookಅಲ್ಲಿ ಬಲು ಶೂರ
You can get enough, get enough
ತಂದನೋ ತಂದನೋ ಗೆಲುವನ್ನು ತಂದನೋ
ಅರ್ಧ ರಾಜ್ಯಕ್ಕೆ ಒಡೆಯನೋ??
To become his ಸವಾರಿ in his auto ಎಷ್ಟು ಪುಣ್ಯ ಮಾಡಬೇಕಣ್ಣೋ?
ಬೇಕಣ್ಣೋ, ಬೇಕಣ್ಣೋ, ಬೇಕಣ್ಣೋ, ಬೇಕಣ್ಣೋ)

ಕೈಯ ತಟ್ಟಿ ಕೂಗಿದರೆ ಹಾಜರಿ ನಾವು
ಹೇಳಿದಲ್ಲಿ ಹೋಗುವೆವು ಹೇಳಿರಿ ನೀವು

Meterಯಿನ ಮೇಲೆ ನಯಾ ಪೈಸೆಯೂ ಬೇಡಾ
ಮಾನವತೆ ನಮಗೂ ಇದೆ ಮರೆಯಲೇ ಬೇಡಾ
ಉಚಿತದಲಿ ಪಯಣವಿದೆ ಪ್ರಸವದ ನೋವಿಗೆ
ಹಗಲಿರುಳು ಕಡಿಮೆ ದರ ವೃದ್ದರ ಪಾಲಿಗೆ
ಯಾವ್ದೇ ಸರ್ಕಾರ ಬಂದ್ರು
ಯಾರೇ ಸರದಾರ ಬಂದ್ರು
ನಮ್ಗೆ ನಾವೇ ರಾಜ ಆಟೋ ರಾಜಾ
ಅತೀರಥ ಮಹಾರಥ ಸಾರಥಿ
ಯಾವ್ದೇ address ಆದ್ರೂ ಇದೆ ಮಾಹಿತಿ
ಅತೀರಥ ಮಾಹರಥ ಸಾರಥಿ
ಎಲ್ಲರಿಗೂ ಗೊತ್ತು ನಮ್ಮ ಸಂಗತಿ

Degreeಗಳು ಕಯ್ಯಲಿದೆ ದಡ್ಡರು ಅಲ್ಲ
ಸ್ವಂತ ಕೃಷಿ ಸಾಗುತಿದೆ ಚಿಂತೆಯೇ ಇಲ್ಲ

ಖಾಕಿ ಬಟ್ಟೆ ಧರಿಸುವೆವು ನ್ಯಾಯವೇ ನಾವು
ಜನಗಣಕೆ ದುಡಿಯುವೆವು ಮನಸೇ ಹೂವು
ಹೆತ್ತವರ ಹೊತ್ತವರ ಶಕ್ತಿಯು ಹಿಂದಿದೆ
ಬೆಳ್ಳಿತೆರೆ ಉತ್ತಮರ ಚಿತ್ರವು ಮುಂದಿದೆ
ಒಂದು ಕೃಷ್ಣನ ಚಕ್ರ ಎರಡು ಅಶೋಕ ಚಕ್ರ
ಮೂರು ಕಾಲದ ಚಕ್ರ ಜೀವನ ಚಕ್ರ
ಅತೀರಥ ಮಾಹಾರಥ ಸಾರಥಿ
Auto driver ಕೂಡ ಒಬ್ಬ ಸಾಹಿತಿ
ಅತೀರಥ ಮಾಹಾರಥ ಸಾರಥಿ
ಎಲ್ಲಾರನು ಪ್ರೀತಿಸುವ ಸಂಸ್ಕೃತಿ

ಕೈ ಮುಗಿದು ಏರು ಇದು ಕನ್ನಡದ ತೇರು
ನಂಬಿ ಬಂದು ಕೂರು ಇದು ಕನ್ನಡಿಗನ ತೇರು
ನಮದು ಬೆವರಿನ ಬಂಡಿ ಎಂದು ನಿಲ್ಲುವುದಿಲ್ಲ
ನಿಮಗೆ ಸೇವೆಯ ಮಾಡೋ ಭಾಗ್ಯ ನೀಡಿದಿರಲ್ಲ
ನಾವೇ ನರ ನಾಡಿ ರಾಜಧಾನಿಗೆ

ಸಾರಥಿ
ಸೂರ್ಯ ನಮ್ಗೆ ಎತ್ತುತಾನೆ ಆರತಿ

ಸಾರಥಿ
ರಥ ನಡೆಸೋ ಕೃಷ್ಣನಿಗೆ ಸಂತತಿ



Credits
Writer(s): V. Nagendra Prasad, V Harikrishna
Lyrics powered by www.musixmatch.com

Link