Payanadalli

ಪಯಣದಲ್ಲಿ ಮೌನ ಸಾಕು ನಯನದಲ್ಲಿ ಇನ್ನೇನು ಬೇಕು
ಕಣ್ಣು ಕಣ್ಣು ಸೇರುವಂತ ಸಣ್ಣ ಸಲಿಗೆ ಇರಲಿ ಸಾಕು
ಕವಲು ದಾರಿ ಕೈಬೀಸಿ ಕರೆಯುತಿದೆ ನಮ್ಮನ್ನು
ಕೊಂಚ ದೂರ ಕೈನೀಡಿ ಕರೆದೊಯ್ಯಲೇ ನಿಮ್ಮನ್ನು
ನಯವಾಗಿ ಬರಲಾರೆ ಅಂತೆಲ್ಲಾ ಹೇಳದಿರಿ
ದಯಮಾಡಿ ಇಲ್ಲಿಂದ ಮುಂದೆಲ್ಲಿ ಕೇಳದಿರಿ
ಕೆಲವೊಂದು ಪ್ರಶ್ನೆ ಕೇಳದಿರುವುದೇ ಚೆಂದ
ಒಂಟಿ ಹರೆಯಕ್ಕೆ ನಡೆವಂತ ಸರಿದಾರಿ ಸಿಗದು
ತುಂಟ ಹೆಜ್ಜೆಯನು ಇಡದಂತ ಅನುರಾಗ ಇರದು
ಇಂತ ಏಕಾಂತ ನನಗೊಂದು ವರವೆನ್ನಬಹುದು
ಚಡಪಡಿಸುವ ಎದೆಯೊಳಗಿನ ಹಸಿಬಿಸಿ ಪಿಸುಮಾತೊಂದನು
ಒಮ್ಮೆ ನೀವು ಎದೆಗೆ ಒರಗಿ ಕೇಳಬಾರದೆ
ಇಷ್ಟಕಾಮ್ಯ ಎಷ್ಟು ರಮ್ಯ ಎನ್ನುವುದನು ತಿಳಿವುದಕೆ
ಅಷ್ಟೋ ಇಷ್ಟೋ ಗಳಿಸಬೇಕು ಅಡ್ಡದಾರಿ ತಿಳುವಳಿಕೆ
ದಯಮಾಡಿ ಕಾಲ್ಬೆರಳಲ್ ಏನನ್ನೋ ಗೀಚದಿರಿ
ಇನ್ನೆಲ್ಲೋ ನೋಡುತ್ತಾ ಒಳಗೊಳಗೇ ನಾಚದಿರಿ
ಕಳೆದುಹೋಗುವ ಬನ್ನಿ ದಾರಿ ಸಿಕ್ಕುವ ಮುನ್ನ
ಪಯಣದಲ್ಲಿ ಮೌನ ಸಾಕು ನಯನದಲ್ಲಿನ್ನೇನು ಬೇಕು
ಕಣ್ಣು ಕಣ್ಣು ಸೇರುವಂತ ಸಣ್ಣ ಸಲಿಗೆ ಇರಲಿ ಸಾಕು
ಕವಲು ದಾರಿ ಕೈಬೀಸಿ ಕರೆಯುತಿದೆ ನಮ್ಮನ್ನು
ಕೊಂಚ ದೂರ ಕೈನೀಡಿ ಕರೆದೊಯ್ಯಲೇ ನಿಮ್ಮನ್ನು
ನಯವಾಗಿ ಬರಲಾರೆ ಅಂತೆಲ್ಲಾ ಹೇಳದಿರಿ
ದಯಮಾಡಿ ಇಲ್ಲಿಂದ ಮುಂದೆಲ್ಲಿ ಕೇಳದಿರಿ
ಕೆಲವೊಂದು ಪ್ರಶ್ನೆ ಕೇಳದಿರುವುದೇ ಚೆಂದ



Credits
Writer(s): Yogaraj R Bhatt, B Ajaneesh Lokanath
Lyrics powered by www.musixmatch.com

Link