Ananda Paramananda

ಆನಂದ ಪರಮಾನಂದ ಪರಮಾನಂದ
ಆನಂದ ಪರಮಾನಂದ ಪರಮಾನಂದ
ತಾಯಿ ತಂದ ಜನ್ಮದಿಂದ ಜಗದಾನಂದ
ಗುರುವು ತಂದ ಪುಣ್ಯದಿಂದ ಜನುಮಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
ಆನಂದ ಪರಮಾನಂದ ಪರಮಾನಂದ

ಬಾಳಿನ ಜೊತೆಬಂದ
ಸಕಲಕೂ ಸಮನಾದ
ಮಡದಿಯ ನೆರಳಿಂದ
ಧರ್ಮಾನಂದ

ಹ್ರದಯದ ನೋವನ್ನು
ಪ್ರೀತಿಯ ಸುಧೆ ಮಾಡಿ
ನಾಲ್ವರ ನಗಿಸುವುದೆ
ಮನುಜಾನಂದ

ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ
ಗುರುವು ತಂದ ಪುಣ್ಯದಿಂದ ಜನುಮಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
ಆನಂದ ಪರಮಾನಂದ ಪರಮಾನಂದ

ವಂಶದ ಲತೆಯಲ್ಲಿ
ಅಂಶದ ಸುಮವಾಗಿ
ಅರಳುವ ಮಗನಿಂದ ಮಧುರಾನಂದ
ಬೆಳೆಯುವ ಶಶಿಯಂತೆ
ಮಗನು ಮೆರೆದಾಗ
ಹೆತ್ತವರೊಡಲಲ್ಲಿ ಸ್ವರ್ಗಾನಂದ

ದಾನ ಧರ್ಮಗಳ ಬಲದಲ್ಲಿ ಆ ಮಗನು
ದಾನ ಧರ್ಮಗಳ ಬಲದಲ್ಲೇ ಆ ಮಗನು
ನೂರು ಕಾಲ ಬಾಳಿದಾಗ ಪುಣ್ಯಾನಂದ
ನಾವು ತಂದ ಪುಣ್ಯದಲ್ಲೆ ನಮಗಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
ಆನಂದ ಪರಮಾನಂದ ಪರಮಾನಂದ
ಪರಮಾನಂದ ಪರಮಾನಂದ



Credits
Writer(s): Hamsalekha
Lyrics powered by www.musixmatch.com

Link