Amma Amma I Love You - From "Mourya"

ಉಸಿರಾಗುವೆ
ಹಸಿರಾಗುವೆ
ಆ ಸೂರ್ಯ ಚಂದ್ರ ಇರುವವರೆಗೂ
ಆಕಾಶ ಭೂಮಿ ಇರುವವರೆಗೂ
ನನ್ನಾಣೆಗೂ ನಿನ್ನಾಣೆಗೂ
ಜೊತೆ ಇರುವೆ ನಾ ಎಂದೆಂದಿಗೂ

ಉಸಿರಾಗುವೆ
ಹಸಿರಾಗುವೆ

ಹಸಿವು ಇಲ್ಲ ನಿದಿರೆ ಇಲ್ಲ ಹೃದಯಾ ನಿನ ಪ್ರೀತಿ ಜಪಿಸುತಿದೆ
ಹಗಲು ರಾತ್ರಿ ದಿನವೂ ನಿನ್ನ ನೆನಪೇ ನನ್ನನ್ನು ಕೆಣಕುತಿದೆ
ಇಲ್ಲೂ ನೀನೆ ಅಲ್ಲೂ ನೀನೆ ಎಲ್ಲೆಲ್ಲು ನೀನೇ ಒಲವೆ
ಈ ದೇಹಕು ಈ ಪ್ರಾಣಕು ಪ್ರೀತಿ ಒಂದೇ ಉಸಿರಾಟವು

ಉಸಿರಾಗುವೆ
ಹಸಿರಾಗುವೆ

ಮಧುರ ನಮ್ಮ ಅಮರ ಪ್ರೇಮ ನಮಗೆ ಸೋಲಿಲ್ಲ ಕನಸಲ್ಲೂ
ಕವಿತೆ ಆಗಿ ಚರಿತೆ ಆಗಿ ಜೊತೆಗೆ ಕಳೆಯೋಣ ಜನುಮಗಳು
ಜಗವೆ ಕೇಳು ತಿಳಿಸಿ ಹೇಳು ಒಲವೇ ನಮ್ಮ ಬಾಳು
ಮಣ್ಣಾಣೆಗೂ ಮನದಾಣೆಗೂ ಕೈ ಬಿಡೆನು ನಾ ಎಂದೆಂದಿಗೂ

ಉಸಿರಾಗುವೆ
ಉಸಿರಾಗುವೆ
ಹಸಿರಾಗುವೆ
ಹಸಿರಾಗುವೆ
ಆ ಸೂರ್ಯ ಚಂದ್ರ ಇರುವವರೆಗೂ ಆಕಾಶ ಭೂಮಿ ಇರುವವರೆಗೂ
ನನ್ನಾಣೆಗೂ ನಿನ್ನಾಣೆಗೂ ಜೊತೆ ಇರುವೆ ನಾ ಎಂದೆಂದಿಗೂ



Credits
Writer(s): Gurukiran, S. Narayan
Lyrics powered by www.musixmatch.com

Link