Nandu Nindu Yavaga

ಗಿಡ, ಮರ, ಬಳ್ಳಿ ಹೂ ಬಿಟ್ಟಾಯ್ತು, ನಂದು ನಿಂದು ಯಾವಾಗ? (ಯಾವಾಗ, ಯಾವಾಗ)
ಹಸುವಿಗೆ ಹೋರಿ ಮುತ್ತಿಟ್ಟಾಯ್ತು, ನಂದು ನಿಂದು ಯಾವಾಗ? (ಯಾವಾಗ, ಯಾವಾಗ)
ಹೋಗಬಹುದಾ ಹಿಂಗೆ ನೀನು, ನೋಡಿ ಕೂಡ ನೋಡದೇ?
ಹಸಿ ಸಗಣಿ ಮುದ್ದೆಯಲ್ಲೂ love mark-u ಮೂಡಿದೆ
ನೀ ಹೇಳು, ನೀ ಹೇಳು, ಎರಡ್ರಲ್ ಒಂದು ಈವಾಗ
ನಂದು ನಿಂದು ಯಾವಾಗ?

ಗಿಡ, ಮರ, ಬಳ್ಳಿ ಹೂ ಬಿಟ್ಟಾಯ್ತು, ನಂದು ನಿಂದು ಯಾವಾಗ? (ಯಾವಾಗ, ಯಾವಾಗ)
ಹಸುವಿಗೆ ಹೋರಿ ಮುತ್ತಿಟ್ಟಾಯ್ತು, ನಂದು ನಿಂದು ಯಾವಾಗ? (ಯಾವಾಗ, ಯಾವಾಗ)

(ಯಾವಾಗ? ಯಾವಾಗ?)

ಮುಂದುವರಿಯೋದ್ ಹೆಂಗೆ ಹೇಳು ಇಬ್ರಲ್ಲೊಬ್ರು ಸೋಲದೆ
ಸ್ವಲ್ಪ ಕಾಲು ಜಾರುವ, ಬಾರೇ, ಒಬ್ರನ್ನೊಬ್ರು ಕೇಳದೆ
ಶಕುಂತಲೆಗೆ ಕೊಟ್ಟ ಉಂಗ್ರ ಹೊಳೆಯ ಮೀನು ನುಂಗ್ತದೆ
ಗುರುತು ಸಿಗದೆ ಗಂಡ ಅಬೇಸ್, ನಿಂಗೂ ಹಂಗೆ ಆಗ್ತದೆ
ಹಾವು, ಹಲ್ಲಿ, ಮಂಡ್ರಗಪ್ಪೆ ಜಲ್ದಿ ಪ್ರೀತಿ ಮಾಡ್ತವೆ
ಮನುಷ್ಯ ಮಾತ್ರ ಯಾಕೆ ಹಿಂಗೆ ಎಲ್ಲ late-u ಮಾಡ್ತಾನೆ?
ಏನಾನ ತೀರ್ಮಾನ ತಕಬೇಕು ನಾವೀಗ
ಮುಂದಿಂದೆಲ್ಲ ಯಾವಾಗ? (ಯಾವಾಗ)

ಏಯ್, ಹುಚ್ಚು ಆಸೆ ಹೇಳೋದಕ್ಕೆ ನಾಚ್ಕಬೇಕು ಯಾತಕೆ?
ಮುಚ್ಚು-ಮರೆಯ ಮಂದಿಗೇನಾ marketಅಲ್ಲಿ ಬೇಡಿಕೆ?
ನನ್ನ ಜನ್ಮಕಂತು ಇಲ್ಲ ಹೋರಿಗಿಂತ ಹೋಲಿಕೆ
ಅಚ್ಚ ಕನ್ನಡದಲ್ಲಿ ಪ್ರೀತಿಗೆ ಅನ್ನಬಹುದೇ ಕೂಡಿಕೆ?
ಒಂದು plus-u ಒಂದು ಅಂದ್ರೆ ಎರಡು ಅಂತ ಲೆಕ್ಕವೇ?
ಸರಿ ಉತ್ತರ ಮೂರು ಅಲ್ವೇ, ಪಾಪು ಹುಟ್ಟೋದಿಲ್ಲವೇ?
ಭೂಮಿಗೂ, ಸೂರ್ಯಂಗೂ, ಬೆಳಕು ಬಿದ್ದು ಚಂಭೋಗ
ಚಂದ್ರ ಹುಟ್ಟಿದ್ ಆವಾಗ

ಗಿಡ, ಮರ, ಬಳ್ಳಿ ಹೂ ಬಿಟ್ಟಾಯ್ತು, ನಂದು ನಿಂದು ಯಾವಾಗ? (ಯಾವಾಗ, ಯಾವಾಗ)
ಹಸುವಿಗೆ ಹೋರಿ ಮುತ್ತಿಟ್ಟಾಯ್ತು, ನಂದು ನಿಂದು ಯಾವಾಗ? (ಯಾವಾಗ, ಯಾವಾಗ)

Credits
Writer(s): Yogaraj Bhat, V Harikrishna
Lyrics powered by www.musixmatch.com

Link