Idolle Ramayana

ದಯವಿಟ್ಟು ನಿಂತಲ್ಲೇ ಕಿವಿಕೊಟ್ಟು ಕೇಳಿ
ತೆರದಿಟ್ಟು ನಿಮ್ಮಯ ಗಮನ

ಒಂದಲ್ಲ ಎರಡಲ್ಲ ನೂರಾರು ಪಾತ್ರ
ಮನಸಲ್ಲೇ ಆಡಿವೆ ತನನ
(ಹೌದಪ್ಪ)
ನಮ್ಮಲ್ಲೇ
(ರಾಮ)
ನಮ್ಮಲ್ಲೇ
(ರಾವಣ)
ಇದೊಳ್ಳೆ ರಾಮಾಯಣ
ನಮ್ಮೂರ ರಾಮಾಯಣ
ಇದೊಳ್ಳೆ ರಾಮಾಯಣ
ನಮ್ಮೂರ ರಾಮಾಯಣ (ರಾಮಾಯಣ)

ಈ ಜೀವನ ನೀನಾಡುವ ಇಸ್ಪೀಟಿನ ಆಟ
(ಕಯ್ಯಲ್ಲಿದೆ ನಿನ್ನ ಎಲೆಯೂ)
ನೀ ರಾಜನು, ನೀ ರಾಣಿಯು, ಕೋಡಂಗಿಯೂ ನೀನೇ
(ಚೈತನ್ಯವೇ ನಿನ್ನ ಕಲೆಯೂ)
ಏಕಾಂತದಿ ಕೈಗನ್ನಡಿ ಹಿಡಿದಾಗ ನೀನು
(ಆಗಂತುಕ ಎದುರಾಗುವ)
ಕಂದೀಲಿನ ಬೆಳಕಲ್ಲಿ ಸರಿಯಾಗಿ ನೋಡೋ
(ನಿನ್ನಲ್ಲಿಯ ಬಹುರೂಪವ)
ತಪ್ಪೇನಿದೆ, ತಪ್ಪೇನಿದೆ ಹುಚ್ಚಾದರೆ ಮನಸು
ಗೊತ್ತಿದ್ದರೂ ಗೊತ್ತಿಲ್ಲದ ಹಾಗಿದ್ದರೆ ಸೊಗಸು
ಬಿಸಿಲು ನೆರಳು ಬೆರೆತು ಮಳೆಬಿಲ್ಲ ಹೂಬಾಣ
ಇದೊಳ್ಳೆ ರಾಮಾಯಣ
ನಮ್ಮೂರ ರಾಮಾಯಣ

ಸಾಕಾಗಿದೆ ದೈನಂದಿನ ಈ ಧಾರಾವಾಹಿ
(ನೀ ನಿನ್ನಲೇ ನೋಡು ಮುಖತಾ)
ನೀ ನಾಯಕ, ನೀ ಚಾರಕ, ಖಳನಾಯಕ ನೀನೇ
(ಈ ಸತ್ಯಕೆ ನೀನೇ ಚಕಿತ)
ನೀ ಕಾಣುವ ಈ ಕಾಡಿನ ರಮಣೀಯ ನೋಟ
(ಹೆದ್ದಾರಿಯ ತೊರೆದಾಗಲೇ)
ನೀ ಕೇಳುವೆ ನಿನ್ನಾಳದ ಅಪರೂಪ ಹಾಡು
ಒಳದಾರಿಯ ಹಿಡಿದಾಗಲೇ
ಇನ್ನೂ ಇದೆ, ಇಲ್ಲೇ ಇದೆ, ಈ ಬಾಳಿನ ಒಡಕು
ಸದ್ದಿಲ್ಲದೆ ಮುದ್ದಾಗಿದೆ ಮುಂಜಾವಿನ ಹೊಳಪು
ನನಗೂ ನಿನಗೂ ಕೊನೆಗೂ ಒಲವೊಂದೇ ನಿಲ್ದಾಣ
ಇದೊಳ್ಳೆ ರಾಮಾಯಣ
ನಮ್ಮೂರ ರಾಮಾಯಣ

ಒಂದಲ್ಲ ಎರಡಲ್ಲ ನೂರಾರು ಪಾತ್ರ
ಮನಸಲ್ಲೇ ಆಡಿವೆ ತನನ
ನಮ್ಮಲ್ಲೇ
(ರಾಮ)
ನಮ್ಮಲ್ಲೇ
(ರಾವಣ)
ಇದೊಳ್ಳೆ ರಾಮಾಯಣ
ನಮ್ಮೂರ ರಾಮಾಯಣ
ಇದೊಳ್ಳೆ ರಾಮಾಯಣ (ಇದೊಳ್ಳೆ ರಾಮಾಯಣ)
ನಮ್ಮೂರ ರಾಮಾಯಣ (ನಮ್ಮೂರ ರಾಮಾಯಣ)



Credits
Writer(s): Jayanth Kaikini
Lyrics powered by www.musixmatch.com

Link