Ondu Ooralli Reprise Version

ಇದ್ದರು ಒಂದು ಊರಲ್ಲಿ ರಾಜ ರಾಣಿ
ಇಬ್ಬರೂ ಏರಿ ಕುಂತಾಯ್ತು ಒಂದೇ ದೋಣಿ

ಇದ್ದರು ಒಂದು ಊರಲ್ಲಿ ರಾಜ ರಾಣಿ
ಇಬ್ಬರೂ ಏರಿ ಕುಂತಾಯ್ತು ಒಂದೇ ದೋಣಿ
ತುಂಬಾ ನವೀನ
ಇಂಥ ಪ್ರಯಾಣ
ಸೇರೋದು ಎಲ್ಲೋ ಗೊತ್ತಿಲ್ಲ ದೂರದ ತೀರಯಾನ

ಇದ್ದರು ಒಂದು ಊರಲ್ಲಿ ರಾಜ ರಾಣಿ
ಇಬ್ಬರೂ ಏರಿ ಕುಂತಾಯ್ತು ಒಂದೇ ದೋಣಿ

ಆಗೋದು ಪ್ರೀತಿಯು ಒಂದು ಸರಿಯೇ
ಪ್ರೀತಿನ ಹೇಳಲು ನೂರು ದಾರಿಯೇ

ರಾಣೀನೇ ರಾಜನ ಬಾಳ ತಾರೆಯೇ
ಆ ರಾಜ ಪ್ರೀತಿಸೋ ರೀತಿ ಬೇರೆಯೇ
ಏನೋ ಹುಡುಗಾಟ ಅದರಿಂದ ಪರದಾಟ
ಎದಯಾಳ ತೋರೋ ಕನ್ನಡಿ ಬೇಕು ಪ್ರೇಮಿಗೆ
ಒಂದಾಸೆಗೊಂದು
ಒತ್ತಾಸೆ ಬೇಕು
ಪ್ರೀತೀನೂ ಒಮ್ಮೆ ಕಣ್ಣೀರ ಜೋಗುಳ ಕೇಳಬೇಕು

ಇದ್ದರು ಒಂದು ಊರಲ್ಲಿ ರಾಜ ರಾಣಿ
ಇಬ್ಬರೂ ಏರಿ ಕುಂತಾಯ್ತು ಒಂದೇ ದೋಣಿ

ಬಾನಾಡಿ ರಾತ್ರಿಯೂ ಹಾರಬಲ್ಲದು
ಮಿಂಚೊಂದು ದಾರಿಯ ತೋರಬಲ್ಲದು

ಆ ರಾಣಿ ನೀಡುವ ಒಂದು ಮಿಂಚಿಗೆ
ಈ ರಾಜನು ಕಾದನು ಕಾಲದಾಚೆಗೆ
ಬಂತೇ ಬಿರುಗಾಳಿ ಸದ್ದಿರದೆ ಬೆನ್ನಲ್ಲಿ
ಉಸಿರಾಟ ಕೂಡ ಒಮ್ಮೆಗೆ ನಿಲ್ಲುವಂತಿದೆ
ಏನಾಯ್ತೋ ಕಾಣೆ
ಹೇಗಾಯ್ತೋ ಕಾಣೆ
ರಾಜಾನು ರಾಣಿ ಒಂದಾಗೋ ತೀರವು ದೂರವೇನೆ



Credits
Writer(s): V. Nagendra Prasad
Lyrics powered by www.musixmatch.com

Link