Aase Aase

ಆಸೆ ಆಸೆ ಏನೋ ಆಸೆ ನಿನಗೆ ನಾ ಸೋಲೋ ಆಸೆ
ಆಸೆ ಆಸೆ ನೂರು ಆಸೆ ಸೋತು ನಾ ಗೆಲ್ಲೋ ಆಸೆ
ಓ ಆಗಾಗ ಮೈಯ ಮರೆಸೊ
ಮಾತುಗಳ ಆಡದೆ ಹೋದೆ
ನಿಜವಲ್ಲದ ಕಾಮನಬಿಲ್ಲ
ನಾ ಹೋಲಿಕೆ ಮಾಡುವುದಿಲ್ಲ
ಅಪರೂಪದ ರೂಪ ನೀನೇ
ಸತ್ಯ ಹೇಳುವೆ ನನ್ನಾಣೆ
ಆಸೆ ಆಸೆ ಏನೋ ಆಸೆ ನಿನಗೆ ನಾ ಸೋಲೋ ಆಸೆ
ಆಸೆ ಆಸೆ ನೂರು ಆಸೆ ಸೋತು ನಾ ಗೆಲ್ಲೋ ಆಸೆ
ಸ್ಪರ್ಶ ನಿನ್ನ ಸ್ಪರ್ಶ
ಅರಳಿಸಿದೆ ನನ್ನನ್ನೇ ಪ್ರೀತಿಯ ಹೊರಚೆಲ್ಲಿ
ತಿಳಿನೀರಿನಂತೆ ನಿನ್ನ ಪ್ರೀತಿಯು
ಕಲ್ಲೊಂದು ಬೀಳದಂತೆ ನಾನು ಕಾಯುವೆ
ನೀನೇ ನೀನೇ ನೀನೇ
ಈ ಹೃದಯದ ಬಡಿತ ನೀನೇ
ಈ ಜೀವ ಎಂದೂ ನಿನದೆ
ನಾ ಶೂನ್ಯ ನೀನಿಲ್ಲದೆ
ಆಸೆ ಆಸೆ ಏನೋ ಆಸೆ ನಿನಗೆ ನಾ ಸೋಲೋ ಆಸೆ
ಬರದೆ ನೀನು ಬರದೆ
ಹೊಸದೊಂದು ಸಾಹಿತ್ಯ ಮನಸೆಂಬ ಹಾಳೆಯಲಿ
ಹಿತವಾಗಿ ಮೈಯಲಿ ಶೃತಿಯು ಕಂಪಿಸಿ
ಇತಿಹಾಸವಾಯ್ತು ಪ್ರೇಮಿಗಳ ಹಾಡಲಿ
ತಂಪು ಚಂದ್ರನಂತೆ ಬೆಳಗೊ ಸೂರ್ಯನಂತೆ
ಶಾಶ್ವತ ಈ ಸ್ನೇಹವು
ಸಂಜೀವಿನಿ ಈ ಪ್ರೇಮವು
ಓ ಆಗಾಗ ಮೈಯ ಮರೆಸೊ
ಮಾತುಗಳ ಆಡದೆ ಹೋದೆ
ನಿಜವಲ್ಲದ ಕಾಮನಬಿಲ್ಲ
ನಾ ಹೋಲಿಕೆ ಮಾಡುವುದಿಲ್ಲ
ಅಪರೂಪದ ರೂಪ ನೀನೇ
ಸತ್ಯ ಹೇಳುವೆ ನನ್ನಾಣೆ
ಆಸೆ ಆಸೆ ಏನೋ ಆಸೆ ನಿನಗೆ ನಾ ಸೋಲೋ ಆಸೆ
ಆಸೆ ಆಸೆ ನೂರು ಆಸೆ ಸೋತು ನಾ ಗೆಲ್ಲೋ ಆಸೆ



Credits
Writer(s): Jassie Gift, Sathyaa P N
Lyrics powered by www.musixmatch.com

Link