Kannadave Nammamma

ಕನ್ನಡದ ಸಿದ್ದ
ಹಾಡೋದಕ್ಕೆ ಎದ್ದ
ಕನ್ನಡಕ್ಕೆ ಇವನು
ಸಾಯೋದಕ್ಕು ಸಿದ್ದ

ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು
ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು
ನಾ ಉಸಿರಾಡೋ ಕಾಡಿವಳು

ಬರೆಯೋರ ತವರೂರು
ನಡೆಯೋರ ಹಿರಿಯೂರು
ನಟಿಸೋರ ನವಿಲೂರು
ನುಡಿಸೋರ ಮೈಸೂರು
ಕೂಡಿದರೇ ಕಾಣುವುದು ಎದೆ ತುಂಬಾ ಹಾಡಾಗುವುದು
ಮಧುರ ಮಧುರ ಇದು ಅಮರ ಅಮರ ಇದು
ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು

ಈ ಭಾಷೆ ಕಲಿಯೋದು
ಆಹಾ ಬೆಣ್ಣೆನ ತಿಂದಂತೆ
ನಮ್ಮ ಭಾಷೆ ಬರೆಯೋಕೆ
ಕಲಿಸೋರೆ ಬೇಡಂತೆ
ಹಾಡಿದರೇ ತಿಳಿಯುವುದು ಮೈ ತುಂಬಾ ಓಡಾಡುವುದು
ಸರಳ ಸರಳ ಇದು ವಿರಳ ವಿರಳ ಇದು

ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು

ಅಭಿಮಾನ ಹಾಲಂತೆ
(ಹಾಲಂತೆ)
ರವಿಮಾನ ವಿಷವಂತೆ
ಸಹಿಸೋರು ನಾವಂತೆ
(ನಾವಂತೆ)
ನಿರಭಿಮಾನ ಬೇಡಂತೆ
ಕನ್ನಡತಿ ಆಜ್ಞೆಇದು ಅವಳೆದೆಯಾ ಹಾಡು ಇದು
ಅವಳ ಬಯಕೆ ಇದು ನಮಗೆ ಹರಕೆ ಇದು

ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು
ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು
ನಾ ಉಸಿರಾಡೋ ಕಾಡಿವಳು

ಸಿದ್ದವೋ ಸಿದ್ದವೋ
ಕನ್ನಡಕ್ಕೆ ಸಾಯಲು
ಸಿದ್ದವೋ ಸತ್ತವೋ
ಕನ್ನಡಕ್ಕೆ ಬಾಳಲು



Credits
Writer(s): Hamsalekha
Lyrics powered by www.musixmatch.com

Link