Hrudaya Hrudaya

ಹೃದಯಾ ಹೃದಯಾ (ಹೃದಯಾ ಹೃದಯಾ)
ಹೃದಯವೇ ಕೇಳು (ಹೃದಯವೇ ಕೇಳು)
ಈ ನೋವಿಗೆ ನೀನೇ (ಈ ನೋವಿಗೆ ನೀನೇ)
ನೆಮ್ಮದಿ ಹೇಳು (ನೆಮ್ಮದಿ ಹೇಳು)

ಹೃದಯಾ ಹೃದಯಾ
ಹೃದಯವೇ ಕೇಳು
ಈ ನೋವಿಗೆ ನೀನೇ
ನೆಮ್ಮದಿ ಹೇಳು
ಹೇಳದೇ ಬಂದಿರೋ
ಈ ಮೌನ ಮನಸನ್ನು ಕೊಂದಿದೆ
ಕಾಣದಾ ಈ ದಾರಿಯಾ
ನಡುವಲ್ಲಿ ಏನಿಂಥ ಸೋಲಿದೆ
ಇದ್ದು ಇಲ್ಲದಂತಿರೋ ಒಂಟಿಯಾದ ಜೀವನ

ಹೃದಯಾ ಹೃದಯಾ
ಹೃದಯವೇ ಕೇಳು
ಈ ನೋವಿಗೆ ನೀನೇ
ನೆಮ್ಮದಿ ಹೇಳು

ಆ ಸೂರ್ಯ ರಾತ್ರೀಲಿ ಬರುವಾ ಕಲ್ಪನೆ
ನಿಜವಲ್ಲ ಸುಳ್ಳೆಂಬ ಸತ್ಯ ಗೊತ್ತಿದೆ
ನಾ ಹೇಳೋ ಮಾತೆಲ್ಲ ನಿಜವೇ ಆದರೂ
ಕೇಳೋರು ಯಾರಿಲ್ಲ ನನ್ನ ಮಾತನು
ಈ ಬಾಳ ದಾರೀಲಿ
ಯಾರಿಗೆ ಯಾರಿಲ್ಲ
ಯಾರನ್ನು ದೂರೋದು
ಯಾರದು ತಪ್ಪಿಲ್ಲ
ಯಾವ ರೀತಿ ಓದಲಿ ಕಾಣದಂತ ಸಾಲನು

ಹೃದಯಾ ಹೃದಯಾ
ಹೃದಯವೇ ಕೇಳು
ಈ ನೋವಿಗೆ ನೀನೇ
ನೆಮ್ಮದಿ ಹೇಳು

ಪ್ರತಿಯೊಂದು ನಿಮಿಷಾನು ದಿನವೇ ಆಗಿದೆ
ದಿನವೆಲ್ಲ ಯುಗವಾಗಿ ಮುಂದೆ ನಿಂತಿದೆ
ಮನಸಾರೆ ಕೈಬೀಸಿ ಕೂಗಿ ಕರೆದರೂ
ಸಂತೋಷ ಸಿಗುತಿಲ್ಲ ಎಲ್ಲೇ ಅಲೆದರು
ಯಾರ್ಯಾರು ಶಾಪಾನ
ಇಟ್ಟರೋ ನಾ ಕಾಣೆ
ನಗುವೆಲ್ಲ ಕೈಜಾರಿ
ಹೋಯಿತು ಹಾಗೇನೆ
ಚುಚ್ಚುವಂತ ಗಾಜಿನ ಚೂರಿನಂತೆ ಈ ಯುಗ

ಹೃದಯಾ ಹೃದಯಾ
ಹೃದಯವೇ ಕೇಳು
ಈ ನೋವಿಗೆ ನೀನೇ
ನೆಮ್ಮದಿ ಹೇಳು



Credits
Writer(s): S A Lokesh Kumar, Arjun A P
Lyrics powered by www.musixmatch.com

Link