Ellellu Oduva Manase

ಎಲ್ಲೆಲ್ಲೊ ಓಡುವ ಮನಸೆ
ಓ ಓ ಯಾಕಿಂತ ಹುಚ್ಚುಚ್ಚು ವರಸೆ
ಇಲ್ಲದ ಸಲ್ಲದ ತರಲೆ
ಹಾ ಹ ಹೋದಲ್ಲಿ ಬಂದಲ್ಲಿ ತರುವೆ
ಹರುಷವ ಮುಂದಿಡುವೆ
ವ್ಯಸನವ ಬೇಂಬಿಡುವೆ
ಬಂದರೂ ಅಳುವು ನಗಿಸಿ ನಲಿವ ಮನವೇ

ಎಲ್ಲೆಲ್ಲೊ ಓಡುವ ಮನಸೆ
ಓ ಓ ಯಾಕಿಂತ ಹುಚ್ಚುಚ್ಚು ವರಸೆ
ಇಲ್ಲದ ಸಲ್ಲದ ತರಲೆ
ಹಾ ಹ ಹೋದಲ್ಲಿ ಬಂದಲ್ಲಿ ತರುವೆ

ನಾನು ನನ್ನದೆನ್ನುವ ನಿನ್ನಯ ತರ್ಕವೇ ಬಾಲಿಷ
ಎಲ್ಲ ಶೂನ್ಯವೆನ್ನುವ ನಿನ್ನಯ ವರ್ಗವೇ ಅಂಕುಶ
ಕಲ್ಮಶ ನಿಷ್ಕಲ್ಮಶ ತರ ತರ ನಿನ್ನ ವೇಷ
ದ್ವಾದಶಿ ಏಕಾದಶಿ ಎಲ್ಲ ನಿನ್ನ ಖುಷಿ
ಇದ್ದರು ಜೊತೆಗೆ ದೂರ ಇರುವ ಮನವೇ

ಎಲ್ಲೆಲ್ಲೊ ಓಡುವ ಮನಸೆ
ಓ ಓ ಯಾಕಿಂತ ಹುಚ್ಚುಚ್ಚು ವರಸೆ
ಇಲ್ಲದ ಸಲ್ಲದ ತರಲೆ
ಹಾ ಹ ಹೋದಲ್ಲಿ ಬಂದಲ್ಲಿ ತರುವೆ

ಬೇಕು ಬೇಡ ಎನ್ನುವ ಗೊಂದಲ ಸೃಷ್ಟಿಸೋ ಮಾಯೆ ನೀ
ತಪ್ಪು ಒಪ್ಪು ಎಲ್ಲವ ತೋರುವ ಕಾಣದ ಛಾಯೆ ನೀ
ಕಲ್ಪನೆ ಪರಿಕಲ್ಪನೆ ವಿಧ ವಿಧ ನಿನ್ನ ತಾಣ
ಬಣ್ಣನೆ ಬದಲಾವಣೆ ಎಲ್ಲ ನಿನ್ನ ಹೊಣೆ
ಕಂಡರೂ ಸಾವು ಬದುಕು ಎನುವ ಮನವೇ

ಎಲ್ಲೆಲ್ಲೊ ಓಡುವ ಮನಸೆ
ಅಅ ಆ ಲಲಲ ಲಲಲ ಹ್ಮ್ಮ್ಮ್ಮ್



Credits
Writer(s): J Anoop Seelin
Lyrics powered by www.musixmatch.com

Link