Cheluveya Nota Chenna (From "Shankar Guru")

ಚಿತ್ರ: ಶಂಕರ್ ಗುರು
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ: ಚಿ.ಉದಯ್ ಶಂಕರ್
ನಿರ್ದೇಶನ: ವಿ.ಸೋಮಶೇಕರ್
ಗಾಯಕರು: ಡಾ!! ರಾಜಕುಮಾರ್
ಚೆಲುವೆಯ ನೋಟ ಚೆನ್ನ, ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ, ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ.
ಕಾಮನ ಬಿಲ್ಲು ಚೆನ್ನ, ಸುಳಿವಾ ಮಿಂಚು ಚೆನ್ನ,
ಹೊಳೆಯುವ ನಿನ್ನ ಕಣ್ಣಾ ಕಾಂತಿ ಇನ್ನು ಚೆನ್ನ,
ತಣ್ಣನೆ ಗಾಳಿ ಚೆನ್ನ, ಹುಣ್ಣಿಮೆ ಚಂದ್ರ ಚೆನ್ನ,
ನಿನ್ನನು ಸೇರಿ ನಿಂತ, ನನ್ನ ಬಾಳೆ ಚೆನ್ನ,
ಚೆಲುವೆಯ ನೋಟ ಚೆನ್ನ, ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ, ಚೆಲುವೆಯ ನೋಟ ಚೆನ್ನ.
ಜಿಂಕೆಯ ಕಣ್ಣು ಚೆನ್ನ, ಹವಳದ ಬಣ್ಣ ಚೆನ್ನ,
ಅರಗಿಳಿ ನಿನ್ನಾ ರೂಪ ಚೆನ್ನದಲ್ಲಿ ಚೆನ್ನ,
ಬೆಳಗಿನ ಬಿಸಿಲು ಚೆನ್ನ, ಹೊಂಗೆಯ ನೆರಳು ಚೆನ್ನ,
ಗೆಳತಿಯೇ ನಿನ್ನಾ ಸ್ನೇಹ ಚಿನ್ನಕಿಂತ ಚೆನ್ನ,
ಚೆಲುವೆಯ ನೋಟ ಚೆನ್ನ, ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ, ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ.



Credits
Writer(s): Upendra Kumar, Chi Udaya Shankar
Lyrics powered by www.musixmatch.com

Link