Doora Doora Dooravadalu

ದೂರ, ದೂರ
ದೂರ ದೂರ ದೂರವಾದಳು ದೇವತೆಯು
ಬೇರೆ ಬೇರೆ ಬೇರೆಯಾದವು ಹೂ ಲತೆಯೂ
ದೂರ ದೂರ ದೂರವದಳು ದೇವತೆಯು
ಬೇರೆ ಬೇರೆ ಬೇರೆಯಾದವು ಹೂ ಲತೆಯು
ಮುಂಜಾನೆಯೇ ಇರುಳು ಎನಿಂಥ ಮರುಳು
ಮರೆಯಾಯಿತೇ ಆ ಹಗಲು
ಬರಲಿಲ್ಲ ಹೊಂಬಿಸಿಲು
ದೂರ ದೂರ ದೂರವದಳು ದೇವತೆಯು

ಸಂಗೀತದ ಸಂಚಾರ ಹೊರಟಿರಲು
ಎಲ್ಲಿಂದಲೋ ಬಂದಂಥ ಕಾರ್ಮುಗಿಲು
ಪರವಶದ ಸಮಯದಲ್ಲಿ
ವಿಧಿವಶವೋ ವಿರಹದಲಿ
ಯಾವ ಕುಟಿಲ ಕೈಯ ಬರಹ ಈ ಕಥೆಯೋ
ಯಾವ ಕುಟಿಲ ಕೈಯ ಬರಹ ಈ ಕಥೆಯೋ

ಉಲ್ಲಾಸದ ಆನಂದ ಸಮ್ಮಿಲನ
ಏನಾಯಿತು ಆ ಚಂದ ಸಂಚಲನ
ನೆನಪುಗಳೋ ಸಿಡಿಲುಗಳೋ ಎದೆ ಸುಡುವ ಕನಸುಗಳೂ
ಬಿರುಗಾಳಿ ಎದುರು ಯಾವ ಹಣತೆ ಬಾಳುವುದೋ
ಬಿರುಗಾಳಿ ಎದುರು ಯಾವ ಹಣತೆ ಬಾಳುವುದೋ

ದೂರ ದೂರ ದೂರವದಳು ದೇವತೆಯು
ಬೇರೆ ಬೇರೆ ಬೇರೆಯಾದವು ಹೂ ಲತೆಯು
ಮುಂಜಾನೆಯೇ ಇರುಳು ಎನಿಂಥ ಮರುಳು
ಮರೆಯಾಯಿತೆ ಆ ಹಗಳು
ಬರಲಿಲ್ಲ ಹೊಂಬಿಸಿಲು



Credits
Writer(s): V. Manohar
Lyrics powered by www.musixmatch.com

Link