Ajantha Yellora

ಅಜಂತ ಎಲ್ಲೋರ ಚಿತ್ತಾರ ಶಿಲೆಯಲ್ಲಿ

ಅಜಂತ ಎಲ್ಲೋರ ಚಿತ್ತಾರ ಶಿಲೆಯಲ್ಲಿ
ಅದೆಲ್ಲ ನಾ ಕಂಡೆ, ಅದೆಲ್ಲ ನಾ ಕಂಡೆ
ಈ ತಾಜಾ ತರುಣಿಯಲ್ಲಿ, ಈ ತಾಜಾ ತನುವಿನಲ್ಲಿ

ಬೇಲೂರ ಬಾಲೇರ ಭಾರ ಕಂಬಗಳಲ್ಲಿ
ಬೇಲೂರ ಬಾಲೇರ ಭಾರ ಕಂಬಗಳಲ್ಲಿ
ಚೆಲುವಿನ ಭಾರಾನೋ, ಚೆಲುವಿನ ಭಾರಾನೋ
ಈ ತಾಜಾ ತರುಣಿಯಲ್ಲಿ, ಸೊಂಪಾದ ಪಾದಗಳಲ್ಲಿ

ಮಂದವಾಗಿ ಬಳುಕುವಂಥ ನಾರಿ ಇವಳ
ಅಂದ ನೋಡ ನಿಂತಾಗ ಚಂದ ನೋಡ ನಿಂತಾಗ
ಯಾರೋ ನೀನು ಎಂದು ಕೇಳುತಾವೆ
ಇವಳ ಪೊಗರಿನ ಹೃದಯ ಪಾಲಕಿಯರು
ನಾಟ್ಯದಂತೆ ನಡೆಯುವಾಗ ನಡೆಯುವಾಗ
ಅತ್ತಲಾಡಿ ಇತ್ತಲಾಡಿ ಇತ್ತಲಾಡಿ ಅತ್ತಲಾಡಿ
ಕೀಲು ಕೊಟ್ಟ ಕುದುರೆಯಂತಾಯಿತಲ್ಲ
ನನ್ನೀ ಸುಂದರಿ ಸೊಂಟ ಪೀಠ ಸೊಂಟ ಪೀಠ
(ಸೊಕ್ಕುಂಟು
ಸಿಗ್ಗುಂಟು)
ಸೊಕ್ಕುಂಟು ಸಿಗ್ಗುಂಟು ಈ ಸಜೀವ ಬೊಂಬೆಯಲ್ಲಿ
ಸೊಕ್ಕುಂಟು ಸಿಗ್ಗುಂಟು ಈ ಸಜೀವ ಬೊಂಬೆಯಲ್ಲಿ
ಅಣುಕುಂಟು ಡೊಣ್ಕುಂಟು
ಅಣ್ಕುಂಟು ಡೊಣ್ಕುಂಟು
ಈ ತಾಜಾ ತರುಣಿಯಲ್ಲಿ, ಈ ನಾರಿ ನಡುವಿನಲ್ಲಿ

ಕಣ್ಣಿನಲ್ಲೇ ಕಣ್ಣನಿಟ್ಟು ನೋಡಿದಾಗ
ಬೆದರುತಾಳೆ ಬೆದರುತಾಳೆ ಬೆದರುಗೊಂಬೆ ಆಗುತಾಳೆ
ಮಾತು ಬೇಡ ಮುತ್ತು ನೀಡು ಮುತ್ತು ನೀಡು
ಎಂದರಿವಳು ಅದರುತಾಳೆ ಅಂತದುಂಟಾ ಅನ್ನತಾಳೆ
ದಬ್ಬಿಕೊಂಡ್ರೆ ಬಳ್ಳಿಯಂತೆ ಬಳ್ಳಿಯಂತೆ
ಮೈಯನೆಲ್ಲಾ ಹಬ್ಬುತಾಳೆ ಉಸಿರುಗಟ್ಟಿ ಉಬ್ಬುತಾಳೆ
ಉಸಿರಿನಲ್ಲಿ ಮಾತನಾಡಿ ಮಾತನಾಡಿ
ತುಟಿಯ ತಂಪು ಮಾಡಿದಾಗ ತಣಿಯುತಾಳೆ ಮಣಿಯುತಾಳೆ
(ಎಲ್ಲಕ್ಕೂ
ಆಶ್ಚರ್ಯ)
ಎಲ್ಲಕ್ಕೂ ಆಶ್ಚರ್ಯ ಪಡುತಾಳೆ ಕ್ಷಣದಲ್ಲಿ
ಎಲ್ಲಕ್ಕೂ ಆಶ್ಚರ್ಯ
ಪಡುತಾಳೆ ಕ್ಷಣದಲ್ಲಿ
ಆಶ್ಚರ್ಯ ತುಳುಕೈತೆ, ಆಶ್ಚರ್ಯ ತುಳುಕೈತೆ
ಈ ತಾಜಾ ತರುಣಿಯಲ್ಲಿ ಈ ಕಾರಂಜಿ ಕಣ್ಣಿನಲ್ಲಿ

ನಾನೊಂದು ಟೈಟಾನಿಕ್ boatಆದೆ ಸುಖದಲ್ಲಿ
ನಾನೊಂದು ಟೈಟಾನಿಕ್ boatಆದೆ ಸುಖದಲ್ಲಿ
ಒಡೆದೋದೆ ಮುಳುಗೋದೆ, ಒಡೆದೋದೆ ಮುಳುಗೋದೆ
ಈ ತಾಜಾ ತರುಣಿಯಲ್ಲಿ, ಈ ಕನ್ಯಾ ಕಡಲಿನಲ್ಲಿ



Credits
Writer(s): Hamasalekha, Ratnaja
Lyrics powered by www.musixmatch.com

Link