Kodeyondara Adiyalli

ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ
ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ
ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ
ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ
ಎಲೆ ಎಲೆಗಳ ಮೇಲೆಲ್ಲ ಹನಿಗವಿತೆಯ ಸಾಲು
ಮಲೆನಾಡೆ ಹೊತ್ತಿರಳು ಬಿಳಿ ಹಿಮದ ಶಾಲು
ಶೃಂಗಾರದ ಮನಸುಗಳಲಿ ಬಣ್ಣಗಳ ಕನಸು
ಗಿರಿ ತುದಿಯಲ್ಲಿ ರಂಗೆರೆಚೊ ಮಳೆಬಿಲ್ಲಿಗೂ ಮುನಿಸು
ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ
ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ
ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ
ಕಣಿವೆಯ ಇಳಿಜಾರಿನಲಿ ತಲೆದೂಗುವ ಜಾಜಿ
ಜೋಗುಳ ತನಾಗಿರಲು ದುಂಬಿಗಳ ಜೀಜಿ
ಮಿಡಿವೆದೆಗಳ ಪಿಸುಮಾತು ಕವಿಗರಿಯಾದ ಕವನ
ಮಳೆ ನಿಂತರು ಮುಗಿದಿಲ್ಲ ಕೊನೆಯಿಲ್ಲದ ಪಯಣ
ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ
ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ
ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ
ಹಮ್... ತನನ



Credits
Writer(s): Hrudaya Shiva, Kiran Ravindranath
Lyrics powered by www.musixmatch.com

Link