O Sanjeya Hoove (Acoustic Version)

ಓ ಸಂಜೆಯ ಹೂವೆ
ಬೆಳದಿಂಗಳಾಸೆ ಬಿಡು
ನಾ ಹಚ್ಚಿದ ಹಣತೆ
ನನ್ನುಸಿರೆ ಆರಿಸಿದೆ
ನಾ ಸಾಕಿದ ಮುನಿಸು
ನನ್ನನ್ನೇ ಆಳುತಿದೆ
ನಾವ್ ತುಳಿದ ಪದಿಯು
ವೈರುಧ್ಯ ದಿಕ್ಕಲಿ ತಿರುಗಿವೆ

ಬಿರುಕು ಬಿರುಕಿದ ಶಿಲೆಗೂ
ಪೂಜೆಯ ಬಯಕೆಯು ಬಿರಿದಿದೆ
ಹನಿಯು ಮರೆದನಿಯು
ಕೊರಗುತ ಉದುರಿದೆ

ಹಚ್ಚೆಯಾದ ಹಣೆ ಬರಹಕೆ
ಚುಚ್ಚಿದ ಶಾಹಿಯು ನಮ್ಮದೆ
ಒಲವ ಚಿತೆಯ ಹೊಗೆಯಲಿ
ಘಮಿಸಿದೆ ಎಕಾಂತ

ಈ ಕಣ್ಣಿರ ಹನಿಗೆ
ನನ್ನಿಂದ ಬೀಳ್ಕೊಡುಗೆ
ಈ ಎದೆಯ ಭಾರ
ಆ ದುಃಖವಿನ್ನು ನಿರಂತರ
ನಾ ಹೊರಟ ತೀರ
ಕಣ್ಣೀರ ನಿಲ್ದಾಣ
ನಾ ಬೇಡಿದ ವರವ
ಕೈಯ್ಯಾರೆ ನಾನೇ ಕೊಂದೆನು

ಬರಹ ವಿಧಿ ಬರಹ
ಏರು ಪೇರು ಬರೆದನು
ತರಹ ತರ ತರಹ
ದಿಕ್ಕಾಪಾಲು ಆದೆನು

ಸಿಗದೆ ಹೋದರೆ ನೀನು
ಕಣ್ಣೊಳಗೆ ನೀರಾಗುವೆ
ಬಿತ್ತ ನನ್ನ ಕನಸಿಗೆ
ಕಪ್ಪು ಮಸಿಯ ಬಳಿಯುವೆ



Credits
Writer(s): Judah Sandhy, Vishwajith Rao
Lyrics powered by www.musixmatch.com

Link