Sanchondu illi

ಸಂಚೊಂದು ಇಲ್ಲಿ ಸಂಚಾರಿಯಾಗಿ
ಊರೆಲ್ಲ ಅಲೆದಾಡಿವೆ
ಸಹವಾಸದಿಂದ ಸಂತೋಷವೆಲ್ಲ
ಮಣ್ಣಲ್ಲಿ ಮಣ್ಣಾಗಿದೆ
ಪ್ರತಿ ಕ್ಷಣ ಕಿಡಿ ಕಾರಿದೆ
ಹಗೆತನ ಎದೆ ಕಾದಿದೆ
ಹಾಳಾದ ಬಾಳೇಕೆ ಹೀಗಿದೆ
ಈ ದೇಹ ಸಾವನ್ನೇ ಸಾಕಿದೆ

ಈ ಬಾಳು ಬಾಳೋಕೆ ಅನ್ನೋದೇ ಸುಳ್ಳು
ಕೊಲ್ಲೋಕೆ ನಿಂತಂತಿದೆ
ಈ ಖಾಲಿ ಹಣೆಮೇಲೆ ಗೀಚೋಕೆ ಬದಲು ಬರೆಯನ್ನೇ ಎಳೆದಂತಿದೆ

ಆಸೇನೆ ಇಲ್ಲಿ ಕಿಡಿಕಾರಿದೆ
ಊರೆಲ್ಲ ಸುಡುವ ಹಗೆಯಾಗಿದೆ
ಯಾರಲ್ಲೂ ಇಲ್ಲ ಸಂತಾಪವು
ಸುಳ್ಳಲ್ಲೇ ಹೆಣೆದ ಸಂದೇಶವು
ಮೆರೆದಾಟದಲ್ಲೇ ಇದೆಯಂತೆ ಘೋರಿ
ಮರೆಯಾಗಬೇಕು ಹುಡುಕಯ್ಯ ದಾರಿ
ಬರೆಯೋಕೆ ಮೊದಲೇನೆ ಜಾತಕ
ಅಳಿಸೋಕೆ ನಿಂತಂತೆ ಘಾತುಕ

ಈ ಬಾಳು ಬಾಳೋಕೆ ಅನ್ನೋದೇ ಸುಳ್ಳು
ಕೊಲ್ಲೋಕೆ ನಿಂತಂತಿದೆ
ಈ ಖಾಲಿ ಹಣೆಮೇಲೆ ಗೀಚೋಕೆ ಬದಲು ಬರೆಯನ್ನೇ ಎಳೆದಂತಿದೆ

ಪಮ ಪದನಿಸ ನಿದಪಮಗ
ರಿಗಮಪದ ನಿದಾ ಪಮಪ

ಕಣ್ಣೀರಿಗೂ ನಡುಕ ಬಂದಂತಿದೆ
ಬಿಕ್ಕಳಿಕೆಯು ನಿನ್ನ ನೆನದಂತಿದೆ
ಏದುಸಿರಿಗೂ ಏಕೋ ಆಯಾಸವು
ಚಡಪಡಿಕೆಗೆ ಸಿಲುಕಿ ಆಕ್ರೋಶವು
ಹಠವೆಂಬ ಬಾಣ ಗುರಿ ತಪ್ಪಿ ಹಾರಿ
ಜೋತೆಯಾಗಿ ನಿಂತೋರ ಎದೆಯನ್ನೇ ಸೀಳಿ
ನೆನಪನ್ನೋ ಕೊಲೆಗಾರ ಜಾಣನು
ನಿನ್ನಿಂದಲೇ ನಿನ್ನ ಕೊಂದನು



Credits
Writer(s): D Satya Prakash, Vasuki Vaibhav
Lyrics powered by www.musixmatch.com

Link