Vismithanadhe - From "Maadha Matthu Maanasi"

ವಿಸ್ಮಿತನಾದೆ ನೀ ಬರುವಾಗ
ವಿನೀತನಾದೆ ನೀನಿರುವಾಗ
ಸಮಾಚಾರ ಬೇರೇನು ಬೇಕಿಲ್ಲದೆ
ತಯಾರಾದೆ ನಾನೀಗ ಮಾತಿಲ್ಲದೆ
ನಿನಗಾಗಿಯೇ

ವಿಸ್ಮಿತಳಾದೆ ನೀ ಬರುವಾಗ
ವಿನೀತಳಾದೆ ನೀನಿರುವಾಗ
ಸಮಾಚಾರ ಬೇರೇನು ಬೇಕಿಲ್ಲದೆ
ತಯಾರಾದೆ ನಾನೀಗ ಮಾತಿಲ್ಲದೆ
ನಿನಗಾಗಿಯೇ

ನನ್ನ ನೋಡುತ ನೀ ಏನೋ ಹೇಳುವಾಗ
ಮೆಲ್ಲ ಮಾತ ಮರೆಯೋದೆ ಆಕರ್ಷಕ
ನಮ್ಮಿಬ್ಬರ ಒದ್ದಾಟವು ಎಷ್ಟೊಂದು ಮುದ್ದಾದ ಆಕಸ್ಮಿಕ
ನಿನ್ನ ಕಂಡ ಮೇಲೆ ನನ್ನ ಜೀವವೀಗ
ಸವಿ ಸ್ವಪ್ನದ ಒಂದು ಕಾರ್ಯಾಲಯ
ಮುನ್ಸೂಚನೆ ಏನಿಲ್ಲದೆ ಆದಾಗಲೇ ಚಂದ ಪ್ರೇಮೋದಯ

ವಿಸ್ಮಿತನಾದೆ
ನೀ ಬರುವಾಗ
ವಿನೀತನಾದೆ
ನೀನಿರುವಾಗ
ಸಮಾಚಾರ ಬೇರೇನು ಬೇಕಿಲ್ಲದೆ
ತಯಾರಾದೆ ನಾನೀಗ ಮಾತಿಲ್ಲದೆ
ನಿನಗಾಗಿಯೇ

ಎಲ್ಲಾ ಚಿಂತೆ ಈಗ ಎಲ್ಲೋ ಮಾಯವಾಗಿ
ನಿನ್ನ ತೋಳಿನಲ್ಲೀಗ ಕೂಸಾದೆ ನಾ
ಈ ಭಾವನೆ ಹೆಚ್ಚಾಗಲು ನಿನ್ನಿಂದಲೇ ತಾನೇ ಉತ್ತೇಜನ
ಒಂದೇ ಮಾತಿನಲ್ಲಿ ಇಂದೇ ಹೇಳಲೇನು
ನನ್ನ ಜೀವದ ಜೀವ ನೀನಲ್ಲವೇ
ಆತಂಕವು ಇನ್ನೇತಕೆ ಎಂದೆಂದೂ ಸಂಗಾತ ನಾನಿಲ್ಲವೆ

ವಿಸ್ಮಿತಳಾದೆ
ನೀ ಬರುವಾಗ
ವಿನೀತಳಾದೆ
ನೀನಿರುವಾಗ
ಸಮಾಚಾರ ಬೇರೇನು ಬೇಕಿಲ್ಲದೆ
ತಯಾರಾದೆ ನಾನೀಗ ಮಾತಿಲ್ಲದೆ
ನಿನಗಾಗಿಯೇ
ನಿನಗಾಗಿಯೇ



Credits
Writer(s): Mano Murthy, Jayant Kaikini
Lyrics powered by www.musixmatch.com

Link