Koneye Irada

ಕೊನೆಯೇ ಇರದ ಮೊದಲ ಪದವೇ ಎಲ್ಲಿ ನೀನು? (ಎಲ್ಲಿ ನೀನು?)
ಮೊದಲೇ ಅರಿದ, ಕೊನೆಯ ಪುಟವೇ ಎಲ್ಲಿ ನೀನು? (ಎಲ್ಲಿ ನೀನು?)
ಕೆಣಕಿ ಹೋದೆ (ಹೋದೆ)
ಕನಸೇ, ಬಿಡಲಾರೆ ನಾ ನಿನ್ನನ್ನು

ಹತಾಶನಾಗಿ ನಾ ನಿಂತೇ
ಮುಖವಾಡವನ್ನು ಕಣ್ಣೀರಿನಿಂದ ಅಳಿಸುತ್ತಾ
ಅಪ್ಪೂರ್ವವಾಗಿ ಆರಂಭವಾದ, ಹಾಡನ್ನು
ಅಪೂರ್ಣವಾಗಿ, ನನ್ನಲ್ಲೇ ಬಿಟ್ಟು ಹೋದೆ
ಹೀಗೇಕೆ, ಬೇಗ ನೀ ಬಂದು
ಇನ್ನೊಮ್ಮೆ ಕೂಗು ಮನಬಂದಂತೆ ನನ್ನನ್ನು

ಕೊನೆಯೇ ಇರದ ಮೊದಲ ಪದವೇ ಎಲ್ಲಿ ನೀನು? (ಎಲ್ಲಿ ನೀನು?)
ಮೊದಲೇ ಅರಿದ, ಕೊನೆಯ ಪುಟವೇ ಎಲ್ಲಿ ನೀನು? (ಎಲ್ಲಿ ನೀನು?)

ಆಕಾಶ ಬುಟ್ಟಿ ನೀನಾದೆ ಎದೆಯಾಳದಲ್ಲಿ ನಕ್ಷತ್ರದಂತೆ ಹೊಳೆಯುತ್ತಾ
ಏಕಾಂಗಿಯಾಗಿ ನಾನಿದ್ದರೂನು ಸಂತೇಲಿ
ನಿನ್ನೊಂದಿಗೇನೆ ನನ್ನೆಲ್ಲ ಮಾತು ಗೀತು
ಸಂಸಾರ ಹೀಗೇ ಯಾಕಾಗ?
ನನ್ನನ್ನು ಕಾಡಿ ಇರು ಎಂದೆಂದೂ ನೀನಿನ್ನು

ಕೊನೆಯೇ ಇರದ ಮೊದಲ ಪದವೇ ಎಲ್ಲಿ ನೀನು? (ಎಲ್ಲಿ ನೀನು?)
ಮೊದಲೇ ಅರಿದ, ಕೊನೆಯ ಪುಟವೇ ಎಲ್ಲಿ ನೀನು? (ಎಲ್ಲಿ ನೀನು?)
ಕೆಣಕಿ ಹೋದೆ (ಹೋದೆ)
ಕನಸೇ, ಬಿಡಲಾರೆ ನಾ ನಿನ್ನನ್ನು

Credits
Writer(s): Vijay Prakash, Jayanth Kaikini
Lyrics powered by www.musixmatch.com

Link