Kadalaache

ಬಾನೂ ತಿಳಿ ಮೌನ ಗಾಳಿಯಲಿ ಬೀಸಿ
ಮಳೆ ಹನಿಯ ಮಾಲೆ ಮುತ್ತಾಗುವ ಹಾಗೇ
ಮೊಗ್ಗೂ ಹೂವಾಗಿ ಅರಳಿತ ಕಾಯುತ
ಆ ದುಂಬಿಯ ತುಟಿಗೆ ಮುತ್ತಾಗುವ ಹಾಗೇ ಮುತ್ತಾಯಿತೇ

ಕಡಲಾಚೆ ಮಡಿಲಾಚೆ ಕನಸ್ಸೊಂದು ನನಸಾದಂತೆ
ಮಳೆಯಾಯಿತೆ ಹನಿ ಮುತ್ತಾಯಿತೇ
ಕಡಲಾಚೆ ಮಡಿಲಾಚೆ ಕನಸ್ಸೊಂದು ನನಸಾದಂತೆ
ಮಳೆಯಾಯಿತೆ ಹನಿ ಮುತ್ತಾಯಿತೆ

ಸಂಜೇ ತಿಳಿ ಬಾನಿನಲ್ಲಿ ನಿನ ಕಾಯುತ
ಕಂಬನಿಯ ಮಾಲೆ ಮುತ್ತಾಗುವ ಹಾಗೆ
ಮುತ್ತಾಗಿ ಮೌನ ಜಾರಿದೆ

ನನ್ನಾಸೆಯ ಏಕಾಂತವ ನಿನ್ನಾಸೆಯಂತೆ ಖಾಸಗಿಯಾಗಿ ಕಳೆದೆ ಪ್ರತೀಕ್ಷಣ
ನಿನ್ನಾಸೆಯ ಈ ಪರಿಭಾಷೆಯ ನನ್ನಾಸೆಯಂತೆ ಕೂಗಿ ಹೇಳಲಿ ಎನುವ ನಿರೀಕ್ಷಣಾ

ಮನಸಾದರೆ ಮನಸೇ ಈ ಮನಸನ್ನು ಕ್ಷಮಿಸೆ
ಮನಸಾಗುವ ವರೆಗು ಕಾಯುವೇ
ಮನಸಾಗಲಿ ಈ ಮನಸ ಮಳೆಯಾಗಲೀ ತಿಳಿ ಬಾನಲಿ...
ಮುತ್ತಾಗಲೀ

ಕಡಲಾಚೆ ಮಡಿಲಾಚೆ ಕನಸ್ಸೊಂದು ನನಸಾದಂತೆ
ಮಳೆಯಾಯಿತೆ ಹನಿ ಮುತ್ತಾಯಿತೆ
ಕಡಲಾಚೆ ಮಡಿಲಾಚೆ ಕನಸ್ಸೊಂದು ನನಸಾದಂತೆ
ಮಳೆಯಾಯಿತೆ ಹನಿ ಮುತ್ತಾಯಿತೆ

ಬಾನೂ ತಿಳಿ ಮೌನ ಗಾಳಿಯಲಿ ಬೀಸಿ
ಮಳೆ ಹನಿಯ ಮಾಲೆ ಮುತ್ತಾಗುವ ಹಾಗೇ
ಮೊಗ್ಗೂ ಹೂವಾಗಿ ಅರಳಿತ ಕಾಯುತ
ಆ ದುಂಬಿಯ ತುಟಿಗೆ ಮುತ್ತಾಗುವ ಹಾಗೇ ಮುತ್ತಾಗಿ ಮೌನ ಜಾರಿದೆ



Credits
Writer(s): Anoop Ramaswamy Kashyap, Amit Anand
Lyrics powered by www.musixmatch.com

Link