Appi Tappi

ಬಾನಿನಲ್ಲೇ
ಹೀಗೇಕೆ ನಿಂತೆ ನೀನು ಮೇಘ
ಮೇಲಿಂದ ನಿಂತು ನೋಡುವಾಗ
ನನ್ನ ಮೌನದಲ್ಲೇ
ಮಾತು ಕೇಳಿಸದೆ

ನೀನೇನೊ ಹೀಗೆ
ಒಂದೆ ಮಾತಿನಲ್ಲೆ ಎಲ್ಲವನ್ನು ಹೇಳಬಲ್ಲೆ
ಬೆರೇನೊ ಕೇಳದಾಗ, ಎಲ್ಲಿ ಹೇಳುವೆನು ನಿನ್ನನ್ನೆ ಇಂದು

ಅಪ್ಪಿ-ತಪ್ಪಿ ಮಾತು ಮಾತಲ್ಲೇ
ಪ್ರೀತಿಸುವೆ ನಿನ್ನನು ಎಂದು
ಪ್ರೀತಿಸುವೆ ನಿನ್ನನು ಎಂದು

ತಂಪು ಗಾಳಿ ಹೀಗೆ ಬೀಸಿಕೊಂಡು ತಣ್ಣನೆ
ಪಿಸುಮಾತಿನಲ್ಲಿ ಮಾಡಿದಾಗ ವಂದನೆ
ನಾನು ಕದ್ದು-ಮುಚ್ಚಿ ನೋಡಿದಾಗ ಸುಮ್ಮನೆ
ಕಣ್ಣರೆಪ್ಪೆ ಮುಚ್ಚಿ ತೆರೆಯಲು ಮೆಲ್ಲನೆ

ಹೇಳು ಎನ್ನುತಿವೆ, ನಿನ್ನ ಕಣ್ಣುಗಳು
ನನ್ನ ಕಲ್ಪನೆಯ, ಹುಸಿ ಸನ್ನೆಗಳು
ಈ ರೀತಿ ನಾನು, ಕನಸೇನು ನಿಜವೇನು ಎಂದು ಗೊತ್ತಿರದೆ
ಏನು ಹೇಳಲಾರೆ, ಹೇಳು ನೀನೆ ನನ್ನ ಹತ್ತಿರ ಬಂದು

ಅಪ್ಪಿ-ತಪ್ಪಿ ಮಾತು ಮಾತಲ್ಲೇ
ಪ್ರೀತಿಸುವೆ ನಿನ್ನನು ಎಂದು

ಹೂವಿನನ್ನು
ಹೋಲುವಂತ ನಿನ್ನ ಮಂದಹಾಸವನ್ನು ಕಂಡ
ದುಂಬಿಯಿಂದ ದೂರವಿರು
ನಿನ್ನ ನಗೆ ಕಂಡ, ಆ ದುಂಬಿಗಳು
ಅದೆ ಮಕರಂದ, ಎಂದು ನಂಬಿದವು
ದುಂಬಿಯ ದಾಳಿಗೆ ಸಿಲುಕುವಾ ಮುನ್ನ
ನಿನ್ನ ತುಟಿಯಂಚಿನಿಂದ ನನ್ನ
ಕೆನ್ನೆಗೆ ಬಣ್ಣವಿಟ್ಟು ನೋಡು
ಕಣ್ಣಲ್ಲಿ ಕಣ್ಣನಿಟ್ಟು ನೋಡು
ಇನ್ನು ಕಾಣಿಸದೇ?

ಮಾತೇಕೆ ಈಗ, ನೋಡು ಹೇಳುತಿವೆ ಕಣ್ಣಿನ ಬಿಂದು
ಪ್ರೀತಿಸುವೆ ನಿನ್ನನು ಎಂದು

ಬಾನಿನಲ್ಲೇ
ಹೀಗೇಕೆ ನಿಂತೆ ನೀನು ಮೇಘ
ಮೇಲಿಂದ ನಿಂತು ನೋಡುವಾಗ



Credits
Writer(s): Anup Bhandari
Lyrics powered by www.musixmatch.com

Link