Oh Gunavantha

ಓ ಗುಣವಂತ

ಓ ಗುಣವಂತ ನೀನೆಂದೂ ನನ್ನ ಸ್ವಂತ
ನೀ ನನಗಂತ ಬರೆದಾಯ್ತು ಭಗವಂತ
ಉಸಿರು ಉಸಿರಾಣೆ ನಂಬು ಪ್ರಾಣ ನೀನೆ
ನೀನೆ ಇರುವಾಗ ನನಗೆ ಲೋಕ ಯಾಕೆ

ಓ ಗುಣವಂತ ನೀನೆಂದೂ ನನ್ನ ಸ್ವಂತ
ನೀ ನನಗಂತ ಬರೆದಾಯ್ತು ಭಗವಂತ

ಗೊತ್ತೇನು
ಓಹೊ
ಕೇಳು
ಏನು
ನಾನು ಯಾರೋ ನೀನು ಯಾರೋ ಸೇರಿದ್ದು ಏಕೆ
ಪ್ರೀತಿ ಮಾಡೋದಕ್ಕೆ
ಪ್ರೀತಿ ಮಾಡೋ ದಾಸ ಯಾರೋ ಮಾಡಿದ್ದು ಏಕೆ
ಕೂಡಿ ಬಾಳೋದಕ್ಕೆ
ಈ ನಲಿವಿನಲೂ
ಆ ನೋವಿನಲೂ
ಏನಾದರೂನು ಎಂತಾದರು
ಜೊತೆಜೊತೆಯಲಿ ನಿನ್ನ ಜೊತೆಯಲಿ ಜೊತೆಯಾಗುವೆ ಜೊತೆ ಬಾ

ಓ ಗುಣವಂತ ನೀನೆಂದೂ ನನ್ನ ಸ್ವಂತ
ನೀ ನನಗಂತ ಬರೆದಾಯ್ತು ಭಗವಂತ

ಗುಟ್ಟೊಂದು
ಏನು
ಕೇಳು
ಹೇಳು
ಭೂಮಿ ತೂಕ ಪ್ರೇಮ ಲೋಕ ಬಚ್ಚಿಡುವೆ ಎಲ್ಲಿ
ಹೃದಯದಲ್ಲಿ ಕಣೋ
ಪ್ರೀತಿ ತೂಕ ಮಾಡಬೇಕಾ? ತಕ್ಕಡಿಯೇ ಎಲ್ಲಿ
ಸಂಸಾರ ಕಣೇ
ಈ ಬದುಕಿನಲಿ
ದಿನ ನಗುವಿರಲಿ
ಇಂದಾದರೂನು ಮುಂದಾದರೂ
ಜೊತೆಜೊತೆಯಲಿ ನಿನ್ನ ಜೊತೆಯಲಿ ಜೊತೆಯಾಗುವೆ ಜೊತೆ ಬಾ

ಓ ಗುಣವಂತ ನೀನೆಂದೂ ನನ್ನ ಸ್ವಂತ
ನೀ ನನಗಂತ ಬರೆದಾಯ್ತು ಭಗವಂತ
ಉಸಿರು ಉಸಿರಾಣೆ ನಂಬು ಪ್ರಾಣ ನೀನೆ
ನೀನೆ ಇರುವಾಗ ನನಗೆ ಲೋಕ ಯಾಕೆ



Credits
Writer(s): Nagendra Prasad, V Harikrishna
Lyrics powered by www.musixmatch.com

Link