Shrungarada Hongemara

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ
ಕಳ್ಳಾಟಕೆ ಮಳ್ಳ ಮನ ಛೀ ಅಂದಿದೆ
ಚೆಲ್ಲಾಟಕೆ ಚೆಲುವು ಹ್ಞೂ ಎಂದಿದೆ
ಇಬ್ಬರ ಕಾಮನೆ ನೂರು
ತುಟಿ ಗಾಯಕೆ ಕಾರಣ ಯಾರು
ಇದು ಗೊತ್ತಿಲ್ಲದ ರೋಮಾಂಚನ ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ

ಬೆನ್ನಿಗೆ ಬೆರಳು ಸೋಕಿ
ಕಣ್ಣೆರಡು ಕೇಳಿವೆ ಬಾಕಿ
ಇದು ತುಂಟ ಮೌನಾಚರಣೆಯು
ಸ್ಪರ್ಶವೂ ಕೇಳಿದೆ ಕೊಂಚ
ಉಷ್ಣಾಂಶದ ಬೆಚ್ಚನೆ ಲಂಚ
ಶುರು ಜಂಟಿ ಕಾರ್ಯಾಚರಣೆಯು
ಗೊತ್ತಿದ್ದೂ ದಾರಿ ತಪ್ಪಿದಾಗ ಬೆವರಿನ ಹನಿಯೂ
ಹುಚ್ಚೆದ್ದು ಹಾಡು ಹೇಳಬಹುದೇ ಒಳಗಿನ ದನಿಯು
ಇದು ಆವೇಗದ ಆಲಿಂಗನ ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ

ನಲ್ಮೆಯಲ್ಲೆಲ್ಲವೂ ಚಂದ
ಮನ್ಮಥನ ಹಾವಳಿಯಿಂದ
ಬಚಾವಾದರೇನು ಸುಖವಿದೆ
ಬಿಚ್ಚಿದ ಕೂದಲ ಘನತೆ
ಅರೆ ಮುಚ್ಚಿದ ಕಂಗಳ ಕವಿತೆ
ಪ್ರಣಯಕೊಂದು ಬೇರೆ ಮುಖವಿದೆ
ಕಡು ಮೋಹದಲ್ಲಿ ಗಡಿಯ ರೇಖೆಗೆಲ್ಲಿದೆ ಬೆಲೆಯು
ತಿಳಿಗೇಡಿಯಾಗದೇನೆ ಸಿಗದು ತೋಳಿಗೆ ನೆಲೆಯು
ರತಿ ರಂಗೇರಲು ಪ್ರತಿ ಕ್ಷಣ ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ
(ಟೂ)
ಕಳ್ಳಾಟಕೆ ಮಳ್ಳ ಮನ ಛೀ ಅಂದಿದೆ
(ಛೀ)
ಚೆಲ್ಲಾಟಕೆ ಚೆಲುವು ಹ್ಞೂ ಎಂದಿದೆ
ಇಬ್ಬರ ಕಾಮನೆ ನೂರು
ತುಟಿ ಗಾಯಕೆ ಕಾರಣ ಯಾರು
ಇದು ಗೊತ್ತಿಲ್ಲದ ರೋಮಾಂಚನ ಹೋಗಿ ಬಂತು ಪ್ರಾಣ



Credits
Writer(s): Yogaraj Bhat, V Harikrishna
Lyrics powered by www.musixmatch.com

Link