Manasu Marada

ಮನಸು ಮರದ ತೊಗಟೆ
ಅದ ನಂಬಿ ನೀನು ಹೊರಟೆ

ಮನಸು ಮರದ ತೊಗಟೆ
ಅದ ನಂಬಿ ನೀನು ಹೊರಟೆ
ಮನಸು ಮರದ ತೊಗಟೆ
ಅದ ನಂಬಿ ನೀನು ಹೊರಟೆ
ಮೋಹದ ಮಾಯೆಗೆ ಮೋಸ ಹೋದೆಯಾ?
ನಿನ್ನೇ ಮರೆತೆಯಾ?
ನಿಜವ ಅರಿತೆಯಾ?
ನಾನು ಕಂಡ ಸತ್ಯವೆಲ್ಲ ತತ್ವವಾಗೇ ಕಾಣುತಿದೆ
ತತ್ವವೆಲ್ಲವೂ ಸತ್ಯವಾಗಿದೆ
ಕಾಣೋ ಸತ್ಯವೇ ತತ್ವವಾಗಿದೆ

ಹದಿ ಹರೆಯದ ಆಸೆಗಳು ಅಲೆ ಏಳುವುದು ಸಹಜ
ಹಾದಿ ತಪ್ಪಿ ಹೊರಟಾಗ, ಅನುಭವವೇ ಹೊಸ ಪಾಠ
ಹಣ ಗುಣಗಳ ವೇಷದಲ್ಲಿ ಬದಲಾಗುವನು ಮನುಜ
ನಿಜ ರೂಪ ಕಂಡಾಗ ನೀಚನಂತೆ ಕಾಣುವ
ಹೊರಗೆ ಒಂದು ವೇಷ, ಒಳಗೆ ಒಂದು ದೋಷ
ವೈರತನದ ಘೋಷ, ನಗು ತೋರುವ ಮನುಷ
ಇದುವೇ ಈ ಬದುಕಿನ ಅತೀ ಘೋರವು

ಮನಸು ಮರದ ತೊಗಟೆ
ಅದ ನಂಬಿ ನೀನು ಹೊರಟೆ
ಮನಸು ಮರದ ತೊಗಟೆ
ಅದ ನಂಬಿ ನೀನು ಹೊರಟೆ
ಮೋಹದ ಮಾಯೆಗೆ ಮೋಸ ಹೋದೆಯಾ?
ನಿನ್ನೇ ಮರೆತೆಯಾ?
ನಿಜವ ಅರಿತೆಯಾ?

ಕಡು ಬಡವನೇ ಆದರೂ ಕಳವು ಕೈಗೆ ಕಲಿಸದಿರು
ಕಾಶಿ ಯಾತ್ರೆಗೆ ಹೋದರೂ ಕನಸನೆಂದೂ ಕಳೆಯದಿರು
ಜಾತಿ ಭೇದಗಳ ಕಲಿಸಿ ಮನುಜ ತನವನೇ ಕೊಂದೆ
ಆಸೆ ಮೋಹಗಳ ಬೆಳೆಸಿ ಬದುಕೋದನ್ನೇ ಮರೆತೆ
ಹೊರ ತೋರುವ ಸ್ನೇಹ
ಒಳಗಿರುವ ದಾಹ
ನಂಬಿ ಕೆಟ್ಟ ದ್ರೋಹ
ನೋವು ನೂರು ತರಹ
ಇದುವೇ ಈ ಬದುಕಿನ ಅತೀ ಘೋರವು

ಮನಸು ಮರದ ತೊಗಟೆ
ಅದ ನಂಬಿ ನೀನು ಹೊರಟೆ
ಮನಸು ಮರದ ತೊಗಟೆ
ಅದ ನಂಬಿ ನೀನು ಹೊರಟೆ
ಮೋಹದ ಮಾಯೆಗೆ ಮೋಸ ಹೋದೆಯಾ?
ನಿನ್ನೇ ಮರೆತೆಯಾ?
ನಿಜವ ಅರಿತೆಯಾ?



Credits
Writer(s): Sendil K, Shreevathsa
Lyrics powered by www.musixmatch.com

Link