Heegethake

(मोरा जिया जिया
मोरा जिया जिया
मोरा जिया जिया)

ಹೀಗೇತಕೆ ನೀ ಸೆಳೆಯುವೆ ವಿಪರೀತ
ಹೀಗಾದರೆ ಈ ಹೃದಯವು ಉಳಿದೀತ
ಪರಿಚಯ ಮೆಲ್ಲಗೆ ಪರಿಮಳವಾಗಿ
ಸಿಹಿ ಸಿಹಿ ಭಾವದ ಸುರಿಮಳೆಯಾಗಿ
ಬಡಬಡಿಸುವೆ ನಾನು, ನಿನ್ನನ್ನೇ
ಮನಸಿದು ಹೂವಿನ ಮಂಟಪವಾಗಿ
ಗಮನವ ಕೊಡದಿರೆ ಸಂಕಟವಾಗಿ
ಸರಿಪಡಿಸುವೆ ನಾನು, ನಿನ್ನನ್ನೇ

(ಪ್ರೀತಿಗಿಂತ ಇಲ್ಲ ಬೇರೆ ದೇವರೇ
ಇಲ್ಲಿ ಪ್ರೀತಿಗಿಂತ ಇಲ್ಲ ಬೇರೆ ದೇವರೇ
ಪ್ರೀತಿಗಿಂತ ಇಲ್ಲ ಬೇರೆ ದೇವರೇ
ಇಲ್ಲಿ ಪ್ರೀತಿಗಿಂತ ಇಲ್ಲ ಬೇರೆ ದೇವರೇ)

ಹಣೆಯಲಿ ಬರೆಯಲೇ ಉಸಿರಿನ ರೇಖೆ
ಹೃದಯವೇ ತೆರೆದಿದೆ ಒಲವಿನ ಇಲಾಖೆ
ನಯನಗಳು ದೀಪವಾಗುತ
ಬೆರಳುಗಳೇ ಮಾತನಾಡುತ
ಬಯಕೆ ಇದೆ ರೂಪ ತಾಳುತ
ಬಗೆಹರಿಸು ನೀ
ಚಲಿಸುವೆ ಕನಸಿನ ಸಂಗ್ರಹದಂತೆ
ತುಟಿಯಲೇ ಉಳಿದಿಹ ಬಿನ್ನಹದಂತೆ
ಅಪಹರಿಸುವೆ ನಾನು, ನಿನ್ನನ್ನೇ

(ಬೀದಿಯಲ್ಲಿ ನಿಂತುಕೊಂಡು ಪ್ರೀತಿಯಿಂದ ಹಾಡುವಾಗ ಬರಲಿ ಬರಲಿ ನಿನ್ನ ಮೆರವಣಿಗೆ
ಬೀದಿಯಲ್ಲಿ ನಿಂತುಕೊಂಡು ಪ್ರೀತಿಯಿಂದ ಹಾಡುವಾಗ ಬರಲಿ ಬರಲಿ ನಿನ್ನ ಮೆರವಣಿಗೆ)

ಹೊಸ ಹೊಸ ನೆಪಗಳ ಕಲಿಯುವೆ ನಾನು
ಕರಿಸಲೇ ಚಂದ್ರನ ಬೆಳಕಿನ ಕಮಾಲು
ಇರುಳುಗಳ ದೀರ್ಘವಾಗಿಸಿ
ವಿರಹವನು ತೀವ್ರವಾಗಿಸಿ
ಬವಣೆಯನು ಮೂಕವಾಗಿಸಿ
ಉಪಕರಿಸು ನೀ
ನೆನಪಿನ ಕಣಜದ ಕದ ತೆರೆದಂತೆ
ನೆನೆಯುವ ಮುನ್ನವೇ ಬಳಿ ಇರುವಂತೆ
ಅವಸರಿಸುವೆ ನಾನು, ನಿನ್ನನೇ, ನಿನ್ನನೇ

ಹೀಗೇತಕೆ ನೀ ಸೆಳೆಯುವೆ ವಿಪರೀತ
ಹೀಗಾದರೆ ಈ ಹೃದಯವು ಉಳಿದೀತ



Credits
Writer(s): V Harikrishna, Jayant Kaikini
Lyrics powered by www.musixmatch.com

Link