Ee Sundara

ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲಿ
ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ
ಮೌನವೇ ರಾಗವು, ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲಿ

ದಿನ, ದಿನ, ಕ್ಷಣ, ಕ್ಷಣ ಚಿನ್ನ ನನ್ನ ನಿನ್ನ ಹಾಡಲಿ ಕುಣಿಸಿರುವೆ

ಮನ ಮನ ನಗೋಥರ ಕಣ್ಣ ಅಂಚಲೇ ನಗಿಸಿರುವೆ

ಒಲವೆ, ಒಲವೆ ನಿನ್ನ ನಲಿವೊಂದೇ ವರವೆನ್ನುತ ನಾ ನಲಿವೆ
ಒಲವೆ ನಿನ್ನ ಗೆಲುವೊಂದೇ ಬಲವೆನ್ನುತ ನಾ ಬೆರೆವೆ
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನ್ನದು
ಈ ಸುಂದರ

ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲಿ

ಸಮ, ಸಮ, ಸರಿಗಮ ಸಮಾಗಮ ಇಂಥ ವಿಸ್ಮಯ ಇದೆ ಮೊದಲು
ಘಮ, ಘಮ ಎದೆಯೆಲ್ಲ ಇನ್ನು ಮಾತು ಬರಿ ತೊದಲು

ಉಸಿರೇ, ಉಸಿರೇ ನಿನ್ನ ಉಸಿರಾಗಿ ಈ ಉಸಿರ ಬರೆದಿರುವೆ
ನಮ್ಮ ಹಾಡಿಗೆ ಹೆಸರಾಗಲಿ ಕಾವೇರಿ ಕಲರವವೇ
ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ
ಈ ಸುಂದರ

ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲಿ
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲಿ

ಮೌನವೇ ರಾಗವು, ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ



Credits
Writer(s): Deva, K. Kalyan
Lyrics powered by www.musixmatch.com

Link