Naaligege Jwara

ನಾಲಿಗೆಗೆ ಜ್ವರ ಬಂದಂತಿದೆ
ಪದಗಳು ಮಲಗಿವೆ
ನಿಲ್ಲದಂಥ ನಗು ಬಂದಂತಿದೆ
ತುಟಿಗಳು ಅರಳಿವೆ

ಹೇಳಲು ಆಗದ ಹಾಳಾದ ಭಾವನೆ
ಹೇಳದೆ ಕೇಳದೆ ಬಂದಿದೆ
ಕಣ್ಣಲ್ಲಿ ಕಳಿಸಿದ ಮೌನದ ಕಾಗದ
ಎಲ್ಲಿಗೂ ಹೋಗದೆ ನಿಂತಿದೆ

ನಾಲಿಗೆಗೆ ಜ್ವರ ಬಂದಂತಿದೆ
ಪದಗಳು ಮಲಗಿವೆ

ಬಡಪಾಯಿ ಮನಸಿದು ಕಡುಪೋಲಿ ಆಗಲು
ಅನುಮತಿಯ ನನ್ನೇ ಕೇಳಿದೆ
ನನಗಿದ್ದ ಧೈರ್ಯವು ಅದು ಎಲ್ಲೋ ಹೋಗಿದೆ
ತೊದಲುವುದ ನೀನೇ ಕಲಿಸಿದೆ
ಕಂಗಳು ಸೇರಲು ಬಚ್ಚಿಟ್ಟುಕೊಳ್ಳುವೆ
ನೀ ತುಂಬಾ ನಾಚುವ ಕನಸಿದೆ
ಸ್ನೇಹಿತೆ ನಿನ್ನನು ಚುಂಬಿಸುವಾಸೆಗೆ
ಮರ್ಯಾದೆ ನಡುವೆ ನೆಲೆಸಿದೆ

ನಾಲಿಗೆಗೆ ಜ್ವರ ಬಂದಂತಿದೆ
ಪದಗಳು ಮಲಗಿವೆ

ಅಭಿಮಾನದಲ್ಲಿಯೇ ಅನುರಾಗ ಉಕ್ಕಿದೆ
ನಾ ನಿನ fan-u ಆಗಲೇ
ಆಗಿದ್ದು ಆಗಲಿ ಭಾವನೆಯ ಹಾವಳಿ
ಬಾಯ್ ಬಿಟ್ಟು ಸೀದಾ ಹೇಳಲೇ
ನಂಗಂತೂ ಆಗದು ಬೇಕಂತ ಸೋಲುವೆ
ನನಗೀಗ ಕೋಪ ಬಂದಿದೆ
ತೋಳಿನ ಸ್ಪರ್ಶಕೆ ನೀನೇಕೆ ನಾಚಿದೆ
ನನಗೀಗ ಉತ್ತರ ಬೇಕಿದೆ

ನಾಲಿಗೆಗೆ ಜ್ವರ ಬಂದಂತಿದೆ
ಪದಗಳು ಮಲಗಿವೆ
ನಿಲ್ಲದಂಥ ನಗು ಬಂದಂತಿದೆ
ತುಟಿಗಳು ಅರಳಿವೆ



Credits
Writer(s): Yogaraj R Bhatt, Chandana, Vikram Noel Montrose
Lyrics powered by www.musixmatch.com

Link