Kaveri Theeradalli

ಕಾವೇರಿ ತೀರದಲಿ ಸಂಕ್ರಾಂತಿ ಸಂಜೆಯಲಿ ಪ್ರೇಮ
ಮಲೆನಾಡ ಮಡಿಲಿನಲಿ ಭೂದೇವಿ ಸೆರಗಿನಲಿ ಪ್ರೇಮ
ತಂಗಾಳಿ ತಂಪೆರೆದು ಮುನ್ನೂರು ನುಡಿ ಬರೆದ ಪ್ರೇಮ
ಶೃಂಗಾರ ಕಾವ್ಯದಲಿ ಸಂಗಾತಿಯ ಪಡೆದ ಪ್ರೇಮ
ನಾನು ನೀನು ನಲಿವಾ ದಿನ
ಹಾಲು ಜೇನು ಬೆರೆತಾ ಕ್ಷಣ
ನೂರಾಸೆ ಮನದಲ್ಲಿ ನೀರಾಗಿ ಹರಿದಂತಿದೆ
ಕಾವೇರಿ ತೀರದಲಿ ಸಂಕ್ರಾಂತಿ ಸಂಜೆಯಲಿ ಪ್ರೇಮ

(ಪರಿರಿಸನಿ ರಿಮಪಾಪ ಮರಿ
ಸಾನಿರಿ ಮಮಾಪ)

ನನ್ನೆದೆಯ ಗುಡಿಯಲ್ಲಿ ದೈವಶಿಲೆ ನೀ
ನಾ ಬಯಸಿ ಪಡೆದಂಥ ಜೀವಶಿಲೆ ನೀ
ಚಿಮ್ಮುತಿದೆ ಆಸೆಗಳು ನಿನ್ನೊಲವಲೀ
ಆಣೆ ಇಡು ನಾ ಬರುವೆ ಬಾಳತೀರಲಿ
ನಾನ್ನೊಂದು ಸುಮವಾಗಿ ಕೈ ಸೇರುವೆ
ಸುಮ ನನ್ನ ಉಸಿರೆಂದು ನಾ ಸಾರುವೆ
ಜೀವ ಜೀವ ಸೇರಿ ಪ್ರೇಮಗೀತೆಯಾಗಿದೆ

ಕಾವೇರಿ ತೀರದಲಿ ಸಂಕ್ರಾಂತಿ ಸಂಜೆಯಲಿ ಪ್ರೇಮ

ಚುಕ್ಕಿಗಳು ಬಾನಿನಲಿ ಕಾವಲಿರಲಿ
ಪ್ರೀತಿ ರಥ ಸಾಗಿರಲೂ ಸಾಕ್ಷಿಯಿರಲಿ
ಹುಣ್ಣಿಮೆಯ ಕಣ್ಣಿನಲಿ ಪ್ರೀತಿಯಿರಲಿ
ಬಂಧನವು ಸುಖವೆಂದು ಹೇಳುತಿರಲಿ
ಇರಲಾರೆ ಕ್ಷಣಕಾಲ ದೂರಾಗಿ ನಾ
ತರಲಾರೆ ನೋವನ್ನು ಬೇರಾಗಿ ನಾ
ಜೀವ ಜೀವ ಸೇರಿ ಪ್ರೇಮಗೀತೆಯಾಗಿದೆ

ಕಾವೇರಿ ತೀರದಲಿ ಸಂಕ್ರಾಂತಿ ಸಂಜೆಯಲಿ ಪ್ರೇಮ
ತಂಗಾಳಿ ತಂಪೆರೆದು ಮುನ್ನೂರು ನುಡಿ ಬರೆದ ಪ್ರೇಮ
ನಾನು ನೀನು ನಲಿವಾ ದಿನ
ಹಾಲು ಜೇನು ಬೆರೆತಾ ಕ್ಷಣ
ನೂರಾಸೆ ಮನದಲ್ಲಿ ನೀರಾಗಿ ಹರಿದಂತಿದೆ
ಕಾವೇರಿ ತೀರದಲಿ ಸಂಕ್ರಾಂತಿ ಸಂಜೆಯಲಿ ಪ್ರೇಮ



Credits
Writer(s): Vijayanand, S. Narayan
Lyrics powered by www.musixmatch.com

Link