Manasugalu

ಮನಸುಗಳು
ದೂರವಾಗಿವೆ
ಅರಿವಿರದ ಸಣ್ಣ ತಪ್ಪಿಗೆ
ಒಂಟಿ ಜೀವವೂ ನೊಂದು ಹೋಗಿದೆ
ನಂಬಿದವಳು ಹೇಳಿದ ಮಾತಿಗೆ

ನಾ ನೆಟ್ಟ ಸಸಿಯನ್ನು ಚಿಗುರಲ್ಲೇ ಕಿತ್ತಿಯಿಟ್ಟು
ಹೊರಡೋಕೆ ನಿನಗ್ಹೇಗೆ ಮನಸಾಗಿದೆ
ನಿನ ಮೇಲೆ ನಾನಿಟ್ಟ ನಂಬಿಕೆಯ ಗಿರಿಶಿಖರ
ಸಿಡಿಲಿನ ಬಡಿತಕ್ಕೆ ಉರಿದ್ಹೋಗಿದೆ

ಬರಬೇಡ ನೀನು ನೆನಪಾಗಿ ಹಿಂದೆ
ಇನು ಮುಂದೆ ಮನಸಲ್ಲಿ ನೋವು ಒಂದೇ
ಕಣ್ಣೀರು ಕೂಡ ಹೇಳೋದು ಒಂದೇ
ನಿನ ನೆರಳೇ ನಿನಗಿಲ್ಲ ನಡೆಯೋ ಮುಂದೆ
ಕನಸುಗಳು ಕದವ ಹಾಕಿವೆ
ಹಳೇ ನೆನಪಾ ಹೊರಗೆಬಿಟ್ಟಿವೆ
ನರನಾಡಿಯೆಲ್ಲಲ್ಲಾ ಹರಿದ್ಹೋಗಿವೆ
ನನ ಜೀವ ಜೊತೆಯಲ್ಲಿ ನರಳಾಡಿದೆ



Credits
Writer(s): Sreedhar Kashyap, Shri Hari
Lyrics powered by www.musixmatch.com

Link