Uppu Khaara

(Let's go)

Let's start the ಉಪ್ಪು ಖಾರ song-u

(ಉಪ್ಪು ಖಾರ
ಉಪ್ಪು ಖಾರ)

ಉಪ್ಪು ಖಾರ ತಿಂದಮೇಲೆ ತಪ್ಪಂತೂ ಅಗೋದೇನೆ
ನನ್ನ ಕಣ್ಣು ಬಿದ್ದ ಮೇಲೆ freeze ಆಗಿ ಹೋಗೋದೇನೆ
ಹುಟ್ಟಿದಂಥ ಕೆಟ್ಟ ಗುಣವು ಹೂಳಿದ್ರೂ ಹೋಗೋದಿಲ್ಲ
ಗಾದೆ ಮಾತು ಕೂಗಿ ಹೇಳಿ, ನಂಗಂತೂ ಕೇಳೋದಿಲ್ಲ
ಮುಳ್ಳನು ಮುಳ್ಳಿನಿಂದ ತೆಗೆಯುವ ಹುನ್ನ ನಾನು
ಕಳ್ಳನು ಆಗೋ ಮುಂಚೆ ತುಂಬಾನೇ ಒಳ್ಳೆಯವನು
ಹಂಗಂತ ಏನೇನೊ ಅನ್ಕೋಬೇಡಿ

ಮೈಸೂರ ಮಹಾರಾಜರ ಮೊಮ್ಮಗನು ನಾನಲ್ಲ
ಶೋಕಿಗೆ ನನ್ ಬಿಟ್ರೆ ಯಾರಿಲ್ಲ
ಮೈಸೂರ ಮಹಾರಾಜರ ಮೊಮ್ಮಗನು ನಾನಲ್ಲ
ಶೋಕಿಗೆ ನನ್ ಬಿಟ್ರೆ ಯಾರಿಲ್ಲ

ದುಡ್ಡನ್ನೇ print-u ಮಾಡೋ ಯಂತ್ರಾನೇ ಬೇಕಿಲ್ಲ
ನಮಗೀಗ ಬರುವ ದುಡ್ಡು ಇಡಲು ಜಾಗ ಸಾಲಲ್ಲ
School ಅಲ್ಲೇ ಲಕ್ಷ್ಮೀ ಜೊತೆಗೆ friendship-u ಆಗಿತ್ತು
Teachers-u peon-u ಸೇರಿ ಎಲ್ಲರ purse-u ಹಾರ್ತಿತ್ತು
ಮೂರ್ತಿಯು ಮರಿಯಷ್ಟು ಕೀರ್ತಿಯು ಎವೆರೆಸ್ಟು
ಗೆಳೆಯರ ಬಳಗಕ್ಕೆ ನಾವೇನೆ the best-u
ಅಂದು ನಾನು ಸುಲ್ತಾನ
ಇಂದು ನಾನು ಬಿಡ್ತೀನಾ
ನಾಳೆ ನಾನೇ ನಾಯಕ
ಕೈಚಳಕ ನನ್ನ ಕಾಯಕ

ಶ್ರೀರಾಮಚಂದ್ರ ಆಗೋ ಆಸೇನೆ ನನಗಿಲ್ಲ
ಬಲಭೀಮನಂಥ ಶಕ್ತಿ ಇರ್ಬೇಕಂತ ಏನಿಲ್ಲ
ಬೀರ್ಬಲ್ಲನಂಥ ಯುಕ್ತಿ ಕೊಟ್ಟುಹೋದ ಭಗವಂತ
ನಿನಗಿಷ್ಟ ಬಂದಹಾಗೆ ಬಳಸಿಕೊಳ್ಳೋ ಹೋಗಂತ
ನ್ಯಾಯವು ಅನ್ನೋದು ತಲೆನೋವು ಇದ್ಹಂಗೆ
ಮೋಸವು ಅನ್ನೋದು ಎಳೆನೀರು ಕುಡುದ್ಹಂಗೆ
ಶ್ರೀಮಂತರ ಹಣವೆಲ್ಲ
Seize-u ಮಾಡಿ ಥೂ ಬಿಡ್ಲಾ
ಒಂದೇ ಆಸೆ ನನ್ನದು
ಜಗಕೆ ನಾ ಒಡೆಯನಾಗೋದು

ಉಪ್ಪು ಖಾರ ತಿಂದಮೇಲೆ ತಪ್ಪಂತೂ ಅಗೋದೇನೆ
ನನ್ನ ಕಣ್ಣು ಬಿದ್ದ ಮೇಲೆ freeze ಆಗಿ ಹೋಗೋದೇನೆ
ಹುಟ್ಟಿದಂಥ ಕೆಟ್ಟ ಗುಣವು ಹೂಳಿದ್ರೂ ಹೋಗೋದಿಲ್ಲ
ಗಾದೆ ಮಾತು ಕೂಗಿ ಹೇಳಿ, ನಂಗಂತೂ ಕೇಳೋದಿಲ್ಲ



Credits
Writer(s): Sai Sarvesh
Lyrics powered by www.musixmatch.com

Link