Yello Adu Yello (From "Kanasugara")

ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಗೂಡಿನಲಿ, ಹೊಸ ರಾಗದ ಚಿಲಿಪಿಲಿಯೋ
ಈ ಉಸಿರಿನ ಹಾಡಿನಲಿ, ಅನುರಾಗದ ಕಚಗುಳಿಯೋ
ನೆನಪೇ ನನ್ನ ಮೈಪುಳಕ, ನೆನಪೇ ನನ್ನ ಮೈಜಳಕ
ನೆನಪೇ ನನ್ನ ಧನಕನಕ, ನೆನಪು ಒಂದೇ ಕೊನೆತನಕ

ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ

ನದಿಯ ಅಲೆಯಲ್ಲಿ ನಿನ್ನ ನಗೆಯ ಸವಿನೆನಪು
ಚಿಗುರೋ ಎಲೆಯಲ್ಲಿ ನಿನ್ನ ಲಜ್ಜೆಯ ಸವಿನೆನಪು
ತಿಂಗಳ ಬೆಳಕಿನ ಸುಖದಲ್ಲಿ ನಿನ್ನ ಮುಖದ ಸವಿನೆನಪು
ರೆಪ್ಪೆ ತೆರೆಯುವ ನೆನಪೆ ಚೈತ್ರ ಮಾಸವು
ತುಟಿಯ ತೆರೆಯುವ ನೆನಪೇ ಸುಪ್ರಭಾತವು
ಯಾರೋ ಬರೆದೋರು ನನ್ನೆದೆಯ ಲಾಲಿ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ರಂಗೋಲಿ

ಚಲಿಸೋ ಮೋಡದಲಿ ನಿನ್ನ ತಳುಕಿನ ಸವಿನೆನಪು
ಉಕ್ಕೋ ಕಡಲಲ್ಲಿ ನಿನ್ನ ಆಸೆಯ ಸವಿನೆನಪು
ಗುಡಿಯಲಿ ದೇವರ ದೀಪದಲಿ ನಿನ್ನ ಪ್ರತಿರೂಪದ ನೆನಪು
ಚೆಲುವು ತೆರೆಯುವಾ ನೆನಪೇ ಪ್ರೇಮದರ್ಥವೋ
ಹೃದಯ ತೆರೆಯುವಾ ನೆನಪೇ ಬಾಳಿಗರ್ಥವೋ

ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಗೂಡಿನಲಿ, ಹೊಸ ರಾಗದ ಚಿಲಿಪಿಲಿಯೊ
ಈ ಉಸಿರಿನ ಹಾಡಿನಲಿ, ಅನುರಾಗದ ಕಚಗುಳಿಯೊ
ನೆನಪೇ ನನ್ನ ಮೈಪುಳಕ, ನೆನಪೇ ನನ್ನ ಮೈಜಳಕ
ನೆನಪೇ ನನ್ನ ಧನಕನಕ, ನೆನಪು ಒಂದೆ ಕೊನೆತನಕ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ



Credits
Writer(s): K Kalyan, Rajesh Ramnathan
Lyrics powered by www.musixmatch.com

Link