Guruvige Guru (From "Neeli Malaya Jeevadodaya")

ಗುರುವಿಗೆ ಗುರು, ನಿನ್ನ ಹೆಸರು
ಶುರುವಿಗೆ ಶುರು, ನಿನ್ನ ಹೆಸರು
ಅಯ್ಯಪ್ಪ ಸೋದರ, ಲಂಬೋಧರ ಲಕುಮಿಕರ
ನಮಿಸುವೆ ಗಣಪನೇ, ವರಕೊಡು ಮಹಿಮನೇ

ಗಣಪಣ್ಣನೆಲ್ಲರು ಕೊಂಡಾಡಿರೋ
ಶರಣಂ ಶರಣಂ
(ಶರಣಂ ಶರಣಂ ಶರಣಂ)
ಶಬರೀಶನ ಸಿಂಹಾಸನ ನೋಡೋಕೇ ಹೊರಟೆವೋ
ಮಣಿಹಾರನ ಗಿರಿಸಾಲಿನ ದಾರೀಲೀ ನಡೆದೆವೋ
ಆ ಮೇರು ದಿನಗಳ ಕಾಲ, ಕಾಯೋ ಕಡುಬಿನ ಲೋಲ
ಗಣಪಣ್ಣನೆಲ್ಲರು ಕೊಂಡಾಡಿರೋ
ಶರಣಂ ಶರಣಂ
(ಶರಣಂ ಶರಣಂ ಶರಣಂ)
(ಶರಣಂ ಶರಣಂ ಶರಣಂ)

ತಲೆಯ ಮೇಲೆ ಅವನ ಇರುಮುಡಿ
ಜಾರದಂತೆ ಬಂದು ಕೈ ಹಿಡಿ
ಹೃದಯದಲ್ಲಿ ಅವನ ಗುಣನುಡಿ
ಜಪಿಸಿವಾಗ ಮನಸಾ ಬಿಗಿ ಹಿಡಿ
ಹುಲಿವಾಹನ ಮಹನೀಯನ ಬೇಡೋಕೇ ಹೊರಟೆವೋ
ಅಳದಾ ನದಿ ಪಂಪಾ ನದಿ ದಾರೀಲೀ ನಡೆದೆವೋ
ಆ ಮೇರು ದಿನಗಳು ಪೂರ್ಣ ಕಾಯೋ ಚಾಮರ ಕರ್ಣ

ಗಣಪಣ್ಣನೆಲ್ಲರು ಕೊಂಡಾಡಿರೋ
ಶರಣಂ ಶರಣಂ
(ಶರಣಂ ಶರಣಂ ಶರಣಂ)
(ಶರಣಂ ಶರಣಂ ಶರಣಂ)

ಪಾಲಿಸುವೆವು ಅವನ ನಿಯಮವಾ
ದೂರವಿರಿಸು ಆರೂ ಕಾಮವಾ
ಬೇಡುತಿಹೆವು ಅವನ ಪ್ರೇಮವಾ
ನೀಗು ನಮ್ಮ ಏಳೂ ವ್ಯಸನವಾ
ಕರಿಸ್ವಾಮಿಯ, ಗುರುಸ್ವಾಮಿಯ ಸೇರೋಕೇ ಹೊರಟೆವೋ
ಏರುಮೇಲಿಯ ಹಾಲಾಡಿಯ ದಾರೀಲೀ ನಡೆದೆವೋ
ಆ ಮೇರು ದಿನಗಳು ಪೂರ್ತಿ, ಕಾಯೋ ಸೊಂಡಿಲ ಮೂರ್ತಿ

ಗಣಪಣ್ಣನೆಲ್ಲರು ಕೊಂಡಾಡಿರೋ
ಶರಣಂ ಶರಣಂ
(ಶರಣಂ ಶರಣಂ ಶರಣಂ)
ಗಣಪಣ್ಣನೆಲ್ಲರು ಬೇಳಾಡಿರೋ
ಶರಣಂ ಶರಣಂ
(ಶರಣಂ ಶರಣಂ ಶರಣಂ)
ಶಬರೀಶನ ಸಿಂಹಾಸನ ನೋಡೋಕೇ ಹೊರಟೆವೋ
ಮಣಿಹಾರನ ಗಿರಿಸಾಲಿನ ದಾರೀಲೀ ನಡೆದೆವೋ
ಆ ಮೇರು ದಿನಗಳ ಕಾಲ, ಕಾಯೋ ಕಡುಬಿನ ಲೋಲ

ಗಣಪಣ್ಣನೆಲ್ಲರು ಕೊಂಡಾಡಿರೋ
ಶರಣಂ ಶರಣಂ
(ಶರಣಂ ಶರಣಂ ಶರಣಂ)
(ಶರಣಂ ಶರಣಂ ಶರಣಂ)
(ಶರಣಂ ಶರಣಂ ಶರಣಂ)
(ಶರಣಂ ಶರಣಂ ಶರಣಂ)



Credits
Writer(s): Hamsalekha
Lyrics powered by www.musixmatch.com

Link