Yele Yelege Chiguruva Tavaka - Solo (From "Crazy Loka")

ಎಲೆ ಎಲೆಗೆ ಚಿಗುರೋ ತವಕ
ಅಲೆ ಅಲೆಗೆ ಜಿಗಿಯೋ ತವಕ
ಜಗವಿದು ಸಂಮ್ಮೋಹಕ
ನಗುನಗುತ ನಡೆಸು ಬದುಕ
ಕೊನೆಯುಸಿರು ಇರುವತನಕ
ಕನಸಿರಲಿ ಕೊನೆಯತನಕ
ಕುಂಚವೆ ಕುಂಚವೆ ಕೊಂಚ ಹಚ್ಚು ಬಣ್ಣವಾ
ಮಾಸಿಹೋದಂತ ಚಿತ್ರಕೆ
ಘಾಸಿಯಾದಂತ ಜೀವಕೆ
ಮೌನವೇ ಮೌನವೆ ಮಾತನಾಡು ಮೆಲ್ಲಗೆ
ಇಂತ ಸಂತಾಪ ಏತಕೆ
ಸಾಗಬೇಕೀಗ ಮುಂದಕೆ
ನೋಡು ನೀ ನೋಡು...
ಕಣ್ಣ ಮುಂದಿದೆ ನಲಿವಾ ಜೀವನ
ಎಲೆ ಎಲೆಗೆ ಚಿಗುರೋ ತವಕ
ಅಲೆ ಅಲೆಗೆ ಜಿಗಿಯೋ ತವಕ
ಜಗವಿದು ಸಂಮ್ಮೋಹಕ
ನಗುನಗುತ ನಡೆಸು ಬದುಕ
ಕೊನೆಯುಸಿರು ಇರುವತನಕ
ಕನಸಿರಲಿ ಕೊನೆಯತನಕ
ಪಶ್ಚಿಮ ದಿಕ್ಕಲಿ ಜಾರಿದ ಸೂರ್ಯನು
ಪೂರ್ವದಿ ಬರುವನು...
ಹೊತ್ತು ಹೊಂಬೆಳಕನು
ಬದುಕೆಂದಿಗೂ ಆಕರ್ಷಕ
ನೋವೆಲ್ಲ ಎಂದೂ ತಾತ್ಕಾಲಿಕ
ನೋಡು ನೀ ನೋಡು...
ಕಣ್ಣ ಮುಂದಿದೆ ನಲಿವಾ ಜೀವನ
ಎಲೆ ಎಲೆಗೆ ಚಿಗುರೋ ತವಕ
ಅಲೆ ಅಲೆಗೆ ಜಿಗಿಯೋ ತವಕ
ಜಗವಿದು ಸಂಮ್ಮೋಹಕ
ನಗುನಗುತ ನಡೆಸು ಬದುಕ
ಕೊನೆಯುಸಿರು ಇರುವತನಕ
ಕನಸಿರಲಿ ಕೊನೆಯತನಕ
ಸಾವಿರ ಬಣ್ಣದಾ ಸಂಭ್ರಮ ಇಲ್ಲಿದೆ
ನಿನ್ನಯ ಆಯ್ಕೆಯು ನಿನ್ನದೇ ಕೈಲಿದೆ
ಸಂತೋಷಕ್ಕಿಂದು ಆಮಂತ್ರಣ
ಕಳಿಸೋಣ ಬಾ ನೀ ತಕ್ಷಣ
ನೋಡು ನೀ ನೋಡು...
ಕಣ್ಣಾಮುಂದಿದೆ ನಲಿವಾ ಜೀವನ
ಎಲೆ ಎಲೆಗೆ ಚಿಗುರೋ ತವಕ
ಅಲೆ ಅಲೆಗೆ ಜಿಗಿಯೋ ತವಕ
ಜಗವಿದು ಸಂಮ್ಮೋಹಕ
ನಗುನಗುತ ನಡೆಸು ಬದುಕ
ಕೊನೆಯುಸಿರು ಇರುವತನಕ
ಕನಸಿರಲಿ ಕೊನೆಯಾತನಕ



Credits
Writer(s): Kaviraj, Manikanth Kadri
Lyrics powered by www.musixmatch.com

Link