Nenapugala Maathu Madhura (From "Chandramukhi Pranasakhi")

ನೆನಪುಗಳ ಮಾತು ಮಧುರ

ಮೌನಗಳ ಹಾಡು ಮಧುರ

ನೆನಪುಗಳ ಮಾತು ಮಧುರ
ಮೌನಗಳ ಹಾಡು ಮಧುರ
ಕನಸೇ ಇರಲಿ ನನಸೇ ಇರಲಿ
ಪ್ರೀತಿ ಕೊಡುವ
ಕನಸೇ ಮಧುರ
(ಕನಸೇ ಮಧುರ, ಕನಸೇ ಮಧುರ)

ನೆನಪುಗಳ ಮಾತು ಮಧುರ

ಸಾವಿರ ಹೂಗಳ ಹುಡುಕಿದರೂ
ಚಂದ ಬೇರೆ ಗಂಧ ಬೇರೆ ಸ್ಪರ್ಶ ಒಂದೇ

ಸಾವಿರ ಹೃದಯವ ಹುಡುಕಿದರೂ
ಅಳತೆ ಬೇರೆ ಸೆಳೆತ ಬೇರೆ ಪ್ರೀತಿಯೊಂದೇ
ತಿಂಗಳ ಬೆಳಕನು ಹಿಡಿದು ಗಾಳಿಗೆ ಸವರೋ ಪ್ರೀತಿ
ಗಾಳಿಯ ಗಂಧವ ಕಡೆದು ಅಂದವ ಹೆಣೆಯೋ ಪ್ರೀತಿ
ಸಂಖ್ಯೆ ಇರದೇ ಗುಣಿಸೋ ಪ್ರೀತಿ
ನಿದ್ದೆ ನುಂಗಿ ಕುಣಿಸೋ ಪ್ರೀತಿ
ಶಬ್ದವಿರಲಿ
ಶಬ್ದವಿರಲಿ
ಪ್ರೀತಿ ಕೊಡುವ
ಶಬ್ದ ಮಧುರ
(ಶಬ್ದ ಮಧುರ, ಶಬ್ದ ಮಧುರ)

ನೆನಪುಗಳ ಮಾತು ಮಧುರ

ಸಾವಿರ ಹಾಡನು ಹುಡುಕಿದರೂ
ತಾಳ ಬೇರೆ ಮೇಳ ಬೇರೆ ಸ್ವರಗಳೊಂದೇ

ಸಾವಿರ ಪ್ರೇಮಿಯ ಹುಡುಕಿದರೂ
ತವಕ ಬೇರೆ ಪುಳಕ ಬೇರೆ ಪ್ರೀತಿಯೊಂದೇ
ನದಿಗಳ ಕಲರವಗಳಲಿ ಅಲೆಗಳು ತೊಯೋ ಪ್ರೀತಿ
ಅಲೆಗಳ ಹೊಸತನ ಕಡೆದು ಕಲೆಗಳ ಹೆಣೆಯೋ ಪ್ರೀತಿ
ಚಿಲುಮೆಯಂತೆ ಚಿಮ್ಮೋ ಪ್ರೀತಿ
ಕುಲುಮೆಯೊಳಗೆ ಕಾಯ್ಸೋ ಪ್ರೀತಿ
ಸ್ವಾರ್ಥವಿರಲಿ
ಸ್ವಾರ್ಥವಿರಲಿ
ಪ್ರೀತಿ ಕೊಡುವ
ಸ್ವಾರ್ಥ ಮಧುರ
(ಸ್ವಾರ್ಥ ಮಧುರ, ಸ್ವಾರ್ಥ ಮಧುರ)

ನೆನಪುಗಳ ಮಾತು ಮಧುರ
ಮೌನಗಳ ಹಾಡು ಮಧುರ



Credits
Writer(s): K. Kalyan
Lyrics powered by www.musixmatch.com

Link