Dhaga Dhaga Benki Kidiyu

ಧಗ ಧಗ ಧಗ ಬೆಂಕಿ ಕಿಡಿಯೂ ಪ್ರಜ್ವಲಿಸಿದೆ ಎದೆಯಲಿ
ಕಲ ಕಲ ಕಲ ನೀರ ಝರಿಯೂ ಹರಿದಾಡಿದೆ ಕಣ್ಣಲಿ
ಸಹನೆಯ ಕನ್ನಡಿ ಹಿಡಿದ ಬುಧ್ಧನ ಅಂಶವು ಇವನೇ
ಧರ್ಮವ ಧನುವಾಗಿಸಿದ ಭಾರ್ಗವ ರಾಮನೂ ಇವನೇ
ಸಾಧು ಕಲೆ ಮೊಗದಲಿ ಇರೋ ಸಂಹರಿಸುವ ದೇವನು
ಅಜ್ಞಾತವ ಅನುಸರಿಸಿರೋ ಆಯುಧ ಇವನು

ಎಲ್ಲಿಯೂ ಕಾಣದ ಮಹಾರಾಜ ರಕ್ತದ ಕುಡಿ ಇವ
ಬಾನಿನ ಅಂಚಲಿ ಬೆಳಗುತಿರೋ ಸೂರ್ಯನ ಕಿಡಿ ಇವ ದೀಪದ ರೂಪ
ಇವ ಕಣ್ಣಲೇ ತೋರುವ ತಾಪ ಢಮ ಢಮ ಢಮರುತ ಪ್ರತಿರೂಪ
ಆ ತ್ರಿನೇತ್ರ ಅತ್ಮೀಯ ಕೋಪ
ಉಗ್ರ ಪ್ರತಾಪ ಜ್ವಾಲಾಮುಖಿ ಇರುವ ದ್ವೀಪ
ಹುಡುಕಿದರೂ ಕಾಣದು ಲೋಪ
ಅಧರ್ಮವ ದಹಿಸುವ ಭೂಪ

ಕಣ ಕಣದಲಿ ರಾಮಾಯಣ ಜಗದಲಿ ಇವ ಸಾರುವ
ತಾಯಿಯ ಋಣ ತೀರಿಸುವವ ಜನಗಳ ಮನ ಗೆಲ್ಲುವ
ಸಹನೆಯ ಕನ್ನಡಿ ಹಿಡಿದ ಬುಧ್ಧನ ಅಂಶವು ಇವನೇ
ಧರ್ಮವ ಧನುವಾಗಿಸಿದ ಭಾರ್ಗವ ರಾಮನೂ ಇವನೇ

ಬುದ್ಧನ ಶ್ರವಣಕ್ಕೆ ಸಾಟಿ, ಬದ್ಧನು ಧೈರ್ಯಕ್ಕೆ ಕೋಟಿ
ಕೋಟಿ ಸೂರ್ಯ ತೇಜನು ಇವನು ಅಣು ಅಣು ರಣದಲಿ
ವೇಗದ ಗುಡುಗಂತೆ ಇವನು, ಮಿಂಚಿನ ಸಿಡಿಲಂತೆ ಇವನು
ಕತ್ತಿಯಂತೆ ಚೂಪು ಇವನು ರಕ್ಷಸ ರಣಬಲಿ
ಏ ನುಗ್ಗುವ ರಣಧೀರ, ಹೆದರಿಕೆಯೇ ಇಲ್ಲದ ಕ್ರಾಂತಿವೀರ
ಜಗ ಮೆಚ್ಚುವ ಶೂರ ಶತ್ರು ಕರಾಲ ಪ್ರಹಾರ ಸಂಹಾರ

ಎಲ್ಲಿಯೂ ಕಾಣದ ಮಹಾರಾಜ ರಕ್ತದ ಕುಡಿ ಇವ
ಬಾನಿನ ಅಂಚಲಿ ಬೆಳಗುತಿರೋ ಸೂರ್ಯನ ಕಿಡಿ ಇವ
ಧಗ ಧಗ ಧಗ ಬೆಂಕಿ ಕಿಡಿಯೂ ಪ್ರಜ್ವಲಿಸಿದೆ ಎದೆಯಲಿ
ಕಲ ಕಲ ಕಲ ನೀರ ಝರಿಯೂ ಹರಿದಾಡಿದೆ ಕಣ್ಣಲಿ



Credits
Writer(s): Anirudh Ravichander, Suresh
Lyrics powered by www.musixmatch.com

Link