Kannad Gothilla (From "Kannad Gothilla")

ನಮ್ಮೂರಿಗ್ ಬಂದು
ಎಷ್ಟೇ ವರ್ಷ ಆದರೂ
ಹೇಳ್ತರಲ್ಲ ನಾಚ್ಕೆ ಇಲ್ದೆ
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ

ಸೀಮೇಗಿಲ್ಲದ್ ಶೋಕಿ
ಯಾರಿಗ್ ಬೇಕು ಹೇಳ್ಗುರು
ಮಾತಿಗ್ ಮುಂಚೆ ಹೇಳ್ತೀರಲ್ಲ
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ

ಪ್ರೀತಿ ಶಾಂತಿಗೆ ಹೆಸರು ನಮ್ಮದು
ಕೆಣಕದೆ ಕನ್ನಡ ಕಲಿತು ಮಾತಾಡಿ
ಬೇಡ ಲೇವಡಿ ಯಾಕೆ ಸುಮ್ನೆ ರಾವಡಿ
ಕೇಳ್ರಿ ಒಳ್ಳೆ ಮಾತಲ್ ದಯಮಾಡಿ

ಇನ್ಮೇಲಂತೂ ಮುಲಾಜಿಲ್ಲ ಯಾವತ್ತಿಗೂ ಹೇಳಬೇಡಿ
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ
ಕನ್ನಡ್ ಗೊತ್ತಿಲ್ಲ
ಕನ್ನಡ್ ಗೊತ್ತಿಲ್ಲ

ಕನಸು ಕೊಟ್ಟಿದ್ದು
ಇದೆ ತಾನೇ ನಮ್ಮೂರು
ಕೆಲಸ ಕೊಟ್ಟಿದ್ದು
ಇಲ್ಲೇ ತಾನೇ ನಮ್ಮೋರು
ಆದ್ರೇ ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ

ನಮ್ಮೂರ ನೀರು ಮಲಗೋಕೆ ಸೂರು
ಕೊಟ್ಟ್ಮೇಲೆ
ಹೇಳಿದ್ರೂ ಮುಂಚೆ ಬುದ್ಧಿ ಬರೋದೇ
ಕೆಟ್ಟ್ಮೇಲೆ
ಆದ್ರೇ ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ

ಕರುನಾಡಿನಲ್ಲಿ ಎಂದೂ ಕನ್ನಡಿಗನೇ ಸಾರ್ವಭೌಮ
ಕಣ ಕಣಕೂ ಕನ್ನಡವೇ ಬುನಾದಿ
ಧುಮ್ಮಿಕ್ಕಿ ಹರಿಯೋ ನದಿಯು ಸುಳಿದಾಡೋ ಗಾಳಿ ಕೂಡ
ನಲಿದಾಡುತಿವೆ ಕನ್ನಡ ಮಾತಾಡಿ

ಬೆರಳು ತೋರಲು
ಹಸ್ತ ನುಂಗುವ
ಬುದ್ಧಿ ಎಂದೂ ಸರಿಯಲ್ಲ
ತಾಯಿ ಹೋಲುವ ಸ್ವಚ್ಛ ಭಾಷೆ ನಮ್ಮದು
ಧಕ್ಕೆ ಆದ್ರೆ ಸಹಿಸಲ್ಲ
ಉಪ್ಪು ತಿಂದು ಎರೆಡು ಬಗೆದು ಯಾವತಿಗೂ ಹೇಳ್ಳೇಬೇಡಿ
(ಇಲ್ಲ
Chance-ಏ ಇಲ್ಲ
No way)

ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ
ಕನ್ನಡ್ ಗೊತ್ತಿಲ್ಲ
ಕನ್ನಡ್ ಗೊತ್ತಿಲ್ಲ



Credits
Writer(s): Vasuki Vaibhav, Nakul Abhyankar
Lyrics powered by www.musixmatch.com

Link