Minchina Balli

ಮಿಂಚಿನ ಬಳ್ಳಿ ಬಣ್ಣವ ಚೆಲ್ಲಿ ಮೂಡಿದ ಹಾಗೆ

ಚುಂಬಕ ಗಾಳಿ ಜೀವದ ತುಂಬ ಬೀಸಿದ ಹಾಗೆ
ನೀನು

ಈ ಜೀವನ ಅಪೂರ್ಣ ಖುದ್ದಾಗಿಯೇ ಸಿಗೋ ತನಕ
ರೋಮಾಂಚನ ಅಪೂರ್ವ ಸದ್ದಿಲ್ಲದ ಮಹಾ ಪುಳಕ
ಒಂದೇ ಹೃದಯ
ನನಗೂ ನಿನಗೂ
ಮರುಭೂಮಿಯಲ್ಲೀಗ ಮಳೆಗಾಲ ನೀನಾಗಿ
ಉಸಿರಲ್ಲಿ ಒಂದಾಗಿ ಹೋದೆ

ಮಿಂಚಿನ ಬಳ್ಳಿ (ಮಿಂಚಿನ ಬಳ್ಳಿ)
ಬಣ್ಣವ ಚೆಲ್ಲಿ ಮೂಡಿದ ಹಾಗೆ

ಅತೀ ಅತೀ ವಿಶೇಷ ನಮ್ಮಿಬ್ಬರ ಈ ವಿಳಾಸ
ಜೀವಕಿಂತ ಸಮೀಪ ಇರೋ ಸುಖ ಅನಾಯಾಸ
ಎಂದೆಂದೂ ಎಂದೆಂದೂ ನಿನ್ನವನು
ಎಲ್ಲೆಲ್ಲೂ ನಿನ್ನನ್ನೇ ಕಂಡವನು
ನನ್ನನ್ನೇ ನಿನಗಾಗಿ ತೆತ್ತವನು
ಬೇಕಿಲ್ಲ ಇನ್ನೇನು

ಮಿಂಚಿನ ಬಳ್ಳಿ (ಮಿಂಚಿನ ಬಳ್ಳಿ)
ಬಣ್ಣವ ಚೆಲ್ಲಿ ಮೂಡಿದ ಹಾಗೆ



Credits
Writer(s): Jayant Kaikini, Gummineni Vijay
Lyrics powered by www.musixmatch.com

Link