Aleva Moda (From "Aleva Moda")

ಅಲೆವಾ ಮೋಡ ಅವಳು
ದಿನವೂ ಕಾಡುವವಳು
ಅವಳನೇ ಅರಸುತ ಮನೆಯನೇ ಮರೆತೆನು
ಅವಳಿಗೆ ತಿಳಿಸುವಿರೇನು
ಎದೆಯಾಳದಲ್ಲಿ ಅವಳ ವಿಳಾಸ
ಬಿಡಿಸಿ ಹೇಳಬೇಕೇ ಒಲಿದ ಮೇಲೆ ನಾನು

ಅಲೆವಾ ಮೋಡ ಅವಳು
ದಿನವೂ ಕಾಡುವವಳು
ಅವಳನೇ ಅರಸುತ
ಮನೆಯನೇ ಮರೆತೆನು
ಅವಳಿಗೆ ತಿಳಿಸುವಿರೇನು

ಎದೆಗೊರಗಿ ಎಣಿಸುವೆನು
ಅಡಗಿರುವ ಬಯಕೆಗಳ
ಸಿಗಲಿ ಕೈಗೆ ಮೊದಲು
ಜಗಳ ಉಂಟು ಬಹಳ
ಮನಗಾಣಬಲ್ಲೇ ಅವಳ ಇರಾದೆ
ಸಿಗದೇತಾನೆ ಏನು ಕರೆದ ಮೇಲೆ ನಾನು

ಅಲೆವಾ ಮೋಡ ಅವಳು
ದಿನವೂ ಕಾಡುವವಳು
ಅವಳನೇ ಅರಸುತ
ಮನೆಯನೇ ಮರೆತೆನು
ಅವಳಿಗೆ ತಿಳಿಸುವಿರೇನು

ತೆರೆದಿರದ ಪುಟಗಳಲಿ
ಪದವಿರದ ಬರವಣಿಗೆ
ಕರುಳ ಬಳ್ಳಿಯೊಂದು ಬಿಡದೇ ಸೆಳೆವ ಹಾಗೆ
ನಡು ದಾರಿಯಲ್ಲಿ ಹಸಿರು ನಿಶಾನೆ
ಕಳೆದು ಕೊಳ್ಳಲಾರೆ ಪಡೆದ ಮೇಲೆ ನಾನು
ಮಿನುಗೋ ನೀಲಿ ಮುಗಿಲು
ಮನದಿ ಮೂಕ ದಿಗಿಲು
ಮಮತೆಯ ಮಡಿಲನು ಬಯಸುತ ಅಲೆವೆನು ಕೆರೆಯಿದು ತಲುಪುವುದೇನು
ನದಿ ತೀರದಲ್ಲಿ ಅಲೆಯ ನಿನಾದ
ಮರಳಿ ಹೋಗಲಾರೆ ಇಳಿದ ಮೇಲೆ ನಾನು

ಅಲೆವಾ ಮೋಡ ಅವಳು
ದಿನವೂ ಕಾಡುವವಳು
ಅವಳನೇ ಅರಸುತ
ಮನೆಯನೇ ಮರೆತೆನು
ಅವಳಿಗೆ ತಿಳಿಸುವಿರೇನು



Credits
Writer(s): Jayanth Kaikini, Mano Murthy
Lyrics powered by www.musixmatch.com

Link